Breaking News

ಬಿಟ್ಟು ಬಿಡದ ಮಳೆ ಆಗಮನ : ಮನೆಗಳು ಕುಸಿತ

ಧಾರವಾಡ: ಚಂಡಮಾರುತ ಹವಾಮಾನ ವೈಪರಿತ್ಯದಿಂದ ಧಾರವಾಡದಾದ್ಯಂತ ಬಿರುಸಿನ ಮಳೆಯಾಗುತ್ತಿದ್ದು , ಇದರಿಂದ ಜನಜೀವನ ಅಸ್ತವ್ಯಸ್ತವಾಗಿದೆ .

ಅಷ್ಟೇ ಅಲ್ಲದೇ ಜಿಲ್ಲೆಯಾದ್ಯಂತ ಕೆಲ ಮನೆಗಳಿಗೆ ತೀವ್ರ ಹಾನಿಯಾಗಿದ್ದರೆ , ಸುಮಾರು 50 ಕ್ಕೂ ಹೆಚ್ಚು ಮನೆಗಳು ಭಾಗಶಃ ಧರೆಗುರುಳಿವೆ . ಇಂದು 13 ಮನೆಗಳು ಭಾಗಶಃ ಬಿದ್ದಿದ್ದು , ಕುಂದಗೋಳದಲ್ಲಿ ನಿನ್ನೆ ರಾತ್ರಿ 18 ಹಾಗೂ ನವಲಗುಂದದಲ್ಲಿ 12 ಮನೆಗಳು ಹಾನಿಯಾಗಿವೆ.ನಿನ್ನೆ ರಾತ್ರಿಯಿಂದಲೇ ಆರಂಭವಾಗಿರುವ ಮಳೆ ಬಿಟ್ಟೂ ಬಿಡದೇ ಸುರಿಯುತ್ತಿದೆ.ಮಳೆಯ ಪರಿಣಾಮ ಧಾರವಾಡ ತಾಲೂಕಿನ ವಿವಿಧ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕೂಡ ಕಡಿತಗೊಂಡಿದೆ . ಮುಂಗಾರು ಪ್ರವೇಶಕ್ಕೂ ಮುನ್ನವೇ ಚಂಡಮಾರುತ ಎಫೆಕ್ಸ್‌ನಿಂದಾಗಿ ಮಳೆ ಸುರಿಯುತ್ತಿದೆ .

Share News

About BigTv News

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *