Breaking News

ಮನೆಗಳು ಹಾನಿ : ಅಧಿಕಾರಿಗಳು ಭೇಟಿ

ಕುಂದಗೋಳ : ತಾಲೂಕಿನಲ್ಲಿ ಕಳೆದ ಎರಡು ದಿನಗಳಿಂದ ಸುರಿದ ಮಳೆ ಅದೆಷ್ಟೋ ಸಮಸ್ಯೆ ಉಂಟಾಗಿದೆ . ಅತಿವೃಷ್ಟಿ ಸುಳಿಗೆ ಸಿಲುಕಿ ಹಾಳಾದ ಮನೆ ಹಾಗೂ ಕೃಷಿ ಭೂಮಿಗಳನ್ನು ಇಂದು ಮುಂಜಾನೆ ಕಾಂಗ್ರೆಸ್ ಮುಖಂಡ ರಮೇಶ್ ಕೊಪ್ಪದ ವೀಕ್ಷಣೆ ಮಾಡಿದರು . ಕುಂದಗೋಳ ತಾಲೂಕಿನ ಬೆಣ್ಣೆ ಹಳ್ಳ , ಗೂಗಿ ಹಳ್ಳದ ಪರಿಸ್ಥಿತಿ ಅವಲೋಕಿಸಿ ತೀವ್ರ ಜಲ ಸಂಕಷ್ಟಕ್ಕೆ ಸಿಲುಕಿದ ಕುಂದಗೋಳ ತಾಲೂಕಿನ ಯರೇಬೂದಿಹಾಳ , ಬೆನಕನಹಳ್ಳಿ , ಮುಳ್ಳೋಳ್ಳಿ , ಹಿರೇಗುಂಜಳ ಗ್ರಾಮಗಳಿಗೆ ಭೇಟಿ ನೀಡಿ ಮನೆ ಬಿದ್ದವರ ಸಮಸ್ಯೆ ಆಲಿಸಿ ಪರಿಹಾರಕ್ಕೆ ತಹಶೀಲ್ದಾರ್ ಹಾಗೂ ನೋಡಲ್ ಅಧಿಕಾರಿಗಳ ಜೊತೆ ಮಾತನಾಡುವುದಾಗಿ ತಿಳಿಸಿದರು .

Share News

About BigTv News

Check Also

68 ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿದ ಆರೋಪ, ಕೆಎಎಸ್ ಅಧಿಕಾರಿ ವಿರುದ್ಧ ಎಫ್‌ಐಆರ್!

ಬೆಂಗಳೂರು ಗ್ರಾಮಾಂತರ: ದೇವನಹಳ್ಳಿ ತಾಲೂಕಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ, ಅಕ್ರಮವಾಗಿ ಆರ್‌ಟಿಸಿ ಖಾತೆ ಬದಲಾವಣೆ …

Leave a Reply

Your email address will not be published. Required fields are marked *