Breaking News

ಒಂದು ಕಾಲದಲ್ಲಿ ಪಟ್ಟಣದ ಪ್ರತಿಷ್ಠಿತ ಶಾಲೆಯಾಗಿದ್ದ ಎಸ್​ಜೆಜೆಎಂ ಪಬ್ಲಿಕ್ ಶಾಲೆ ಈಗ ಹಲವು ಇಲ್ಲಗಳ ನಡುವೆ ಕಾರ್ಯ…

ಹಾವೇರಿ:ಜಿಲ್ಲೆಯ ಬ್ಯಾಡಗಿ ಪಟ್ಟಣದಲ್ಲಿರುವ ಎಸ್​ಜೆಜೆಎಂ ಪಬ್ಲಿಕ್ ಶಾಲೆ ಹಲವು ದಶಕಗಳನ್ನು ಕಂಡ ಶಾಲೆ. ಈ ಸರ್ಕಾರಿ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲಿ ವಿವಿಧ ವೃತ್ತಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಒಂದು ಕಾಲದಲ್ಲಿ ಬ್ಯಾಡಗಿ ಪಟ್ಟಣದ ಪ್ರತಿಷ್ಠಿತ ಶಾಲೆಯಾಗಿದ್ದಎಸ್​ಜೆಜೆಎಂ ಪಬ್ಲಿಕ್ ಶಾಲೆ ಈಗ ಹಲವು ಇಲ್ಲಗಳ ನಡುವೆ ಕಾರ್ಯನಿರ್ವಹಿಸುತ್ತಿದೆ ಎಂದು ಪೋಷಕರು ಆರೋಪಿಸಿದ್ದಾರೆ.
ಅಜ್ಞಾನದ ಕತ್ತಲೆ ಓಡಿಸಿ ಬೆಳಕು ನೀಡಬೇಕಾದ ಶಾಲೆಯಲ್ಲಿ ವಿದ್ಯುತ್ ಇಲ್ಲ. ಇಲ್ಲಿಯ ಮಕ್ಕಳು ಕತ್ತಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಶಾಲೆಯ ಮೂಲೆ ಮೂಲೆಯಲ್ಲಿ ಅಸ್ವಚ್ಚತೆ ಮನೆ ಮಾಡಿದ್ದು ಎಲ್ಲೆಂದರಲ್ಲಿ ಧೂಳು ಕಣ್ಣಿಗೆ ರಾಚುತ್ತದೆ. ಇನ್ನು ಶಾಲೆಯಲ್ಲಿ 1350 ವಿದ್ಯಾರ್ಥಿಗಳು ಓದುತ್ತಿದ್ದು ಶಾಲೆಗೆ ಸುಸಜ್ಜಿತ ಶೌಚಾಲಯ ಇಲ್ಲ.

ಮಳೆ ಬಂದರೆ ಸಾಕು ಶಾಲೆಯ ಎಲ್ಲೆಂದರಲ್ಲಿ ಸೋರುತ್ತದೆ. ಮಳೆಗಾಲದಲ್ಲಿ ಒಡೆದ ಹಂಚುಗಳ ನಡುವೆ ಸೋರುತ್ತಿರುವ ಶಾಲೆಯಲ್ಲಿ ವಿದ್ಯಾರ್ಥಿಗಳು ಕುಳಿತು ವ್ಯಾಸಂಗ ಮಾಡುತ್ತಿದ್ದಾರೆ. ಶಾಲೆಗೆ ಸಮರ್ಪಕ ಸಿಬ್ಬಂದಿ ಇಲ್ಲ. ಬೆರಳೆಣಿಕೆಯಷ್ಟು ಶಿಕ್ಷಕರಿದ್ದು, ಅವರೇ ಎಲ್ಲ ತರಗತಿಗಳನ್ನು ನಿಭಾಯಿಸುತ್ತಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ. ಶಾಲೆಯಲ್ಲಿ ಸಿಪಾಯಿಗಳು ಇಲ್ಲದ ಕಾರಣ ಕಸ ಗುಡಿಸುವುದಿಲ್ಲ. ಬದಲಿಗೆ ವಿದ್ಯಾರ್ಥಿಗಳೇ ಬೇಗನೆ ಬಂದು ಶಾಲೆಯಲ್ಲಿ ಕಸಗುಡಿಸಬೇಕಾಗುತ್ತದೆ.

Share News

About BigTv News

Check Also

ಸಚಿವ ಸಂತೋಷ್ ಲಾಡ್ ಅವರಿಗೆ ಅದ್ದೂರಿ ಗೌರವ ಸನ್ಮಾನ; ಆತ್ಮೀಯ ಭೇಟಿಯಲ್ಲಿ…

ಸಚಿವ ಸಂತೋಷ್ ಲಾಡ್ ಅವರಿಗೆ ಕಾಂಗ್ರೆಸ್ ಮುಖಂಡರಿಂದ ಗೌರವ ಸನ್ಮಾನ… ಕಾಂಗ್ರೆಸ್ ಮುಖಂಡರಾದ ಫತೇಶಾ ಯಾರಗಟ್ಟಿ ಹಾಗೂ ದಾದಾಪೀರ್ ಬಳ್ಳಾರಿ ಅಬ್ಬಾಸ್ …

Leave a Reply

Your email address will not be published. Required fields are marked *