ಧಾರವಾಡ : ನಿನ್ನೆ ( ಮಂಗಳವಾರ ) ತಡರಾತ್ರಿ ಹುಬ್ಬಳ್ಳಿ ಹೊರವಲಯದ ಪುಣೆ – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮಧ್ಯೆ ಲಾರಿ ಹಾಗೂ ಖಾಸಗಿ ಬಸ್ ಮಧ್ಯೆ ಸಂಭವಿಸಿದ ಭೀಕರ ಅಪಘಾತದ ಒಂದು ದೃಶ್ಯ ಇದೀಗ ಲಭ್ಯವಾಗಿದೆ ಲಾರಿ ಹಾಗೂ ಬಸ್‌ನ ಮಧ್ಯೆ ಅಪಘಾತ ಸಂಭವಿಸುತ್ತಿದ್ದಂತೆ ಕೆಲ ಸ್ಥಳೀಯರು ಆ ಜಾಗದಲ್ಲಿ ಜಮಾಯಿಸಿದ್ದರು .
ಕೆಲವರು ಸ್ಥಳದಲ್ಲೇ ಸಾವನ್ನಪ್ಪಿ , ಮೃತ ದೇಹಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು . ಲಾರಿ ಚಾಲಕ ತೀವ್ರವಾಗಿ ಗಾಯಗೊಂಡು ಲಾರಿ ಅವಶೇಷಗಳಡಿ ಸಿಲುಕಿಕೊಂಡು ಒದ್ದಾಡುತ್ತಿದ್ದ
ನಿಮ್ಮ ಕಾಲು ಮುಗೀತಿನಿ ನನ್ನ ಹೊರಗಡೆ ತೆಗೆಯಿರಿ ಬಹಳ ನೋವಾಗುತ್ತಿದೆ ಅಣ್ಣಾ ದಯವಿಟ್ಟು ಹೊರಗಡೆ ತೆಗೆಯಿರಿ ‘
ಎಂದು ಅಂಗಲಾಚುತ್ತಿದ್ದ . ಆದರೆ , ಅಲ್ಲಿದ್ದ ಕೆಲವರು ಏನೂ ಮಾಡಲಾಗದ ಪರಿಸ್ಥಿತಿಯಲ್ಲಿ ಅಸಹಾಯಕರಾಗಿ ನಿಂತಿದ್ದರು .
bigtvnews | Hubli Dharwad News | Kannada News | Karnataka News Hubli News | News In Hubli | Local news

