ಸಿದ್ದರಾಮಯ್ಯ ಗಂಜಿ ಕೇಂದ್ರದ ಆಸೆಗಾಗಿ ಆರ್.ಎಸ್.ಎಸ್ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ವಿಚಾರಕ್ಕೆ ತಿರುಗೇಟು ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್, ಎಸ್,ಎಸ್ ನವರು ಯಾವತ್ತೂ ಪ್ರತಿಕ್ರಿಯೆ ನಿಡೋದಿಲ್ಲ. ನಾವು ಆರ್.ಎಸ್.ಎಸ್ ನಿಂದಲೇ ಬಂದವರು ಅದಕ್ಕೆ ನಾವು ಮಾತನಾಡುತ್ತೇವೆ ಎಂದು ಹರಿಹಾಯ್ದರು.
ಮುಸ್ಲಿಂ ತುಷ್ಟಿಕರಣಕ್ಕೋಸ್ಕರ ಸಿದ್ದರಾಮಯ್ಯ ಹಾಗೇ ಮಾತನಾಡುತ್ತಿದ್ದಾರೆ. ಇಟಲಿ ನಾಯಕರಿಗೆ ಹತ್ತಿರವಾಗಲು ಸಿದ್ದರಾಮಯ್ಯ ಆ ರೀತಿ ಹೇಳಿಕೆ ನೀಡ್ತಿದ್ದಾರೆ. ಇನ್ಮೇಲೆ ನಾನು ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಬಾರದೆಂದು ತೀರ್ಮಾನಿಸಿದ್ದೇನೆ ಎಂದು ಜೋಶಿ ಹೇಳಿದರು.
ಸಿದ್ದರಾಮಯ್ಯ ಒಬ್ಬ ಡುಪ್ಲಿಕೇಟ್ ಕಾಂಗ್ರೆಸ್ ನ ನಕಲಿ ಲೀಡರ್, ನಾವ್ಯಾರೂ ಕೇವಲ ಬಿಜೆಪಿಯವರೇ ಹಿಂದೂಗಳೆಂದು ಹೇಳಿಲ್ಲ. ಇವರು ಸದ್ಯ ನಾವು ಹಿಂದೂಗಳೆಂದು ಹೇಳತ್ತಿದ್ದಾರೆ ಅನ್ನೋದೇ ಸಂತೋಷ. ಈ ಹಿಂದೆ ಇವರು ನಾವು ಹಿಂದೂಗಳೇ ಅಲ್ಲ ಎನ್ನುತ್ತಿದ್ದರು ಇವಾಗ ಹಿಂದೂ ಎನ್ನುತ್ತಿದ್ದಾರೆ ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

