Breaking News

ಪಿಎಸ್ ಐ ತಂದೆಗೆ ಬುದ್ದಿ ಹೇಳಲು ಹೋದ ಮಗನಿಗೆ ಬಿತ್ತು ಧರ್ಮದ ಏಟು


ಬೆಳಗಾವಿ: ಸಮಾಜದಲ್ಲಿ ಶಾಂತಿ ಕಾಪಾಡಿ, ಜನರು ತಪ್ಪು ದಾರಿಗೆ ಇಳಿದಾಗ ಅವರನ್ನು ಸರಿದಾರಿಗೆ ತರವುದರ ಜೊತೆಗೆ ಜನರಿಗೆ ನೆಮ್ಮದಿಯ ಜೀವನ ನೀಡುವ ಜವಾಬ್ದಾರಿ ಪೊಲೀಸ್ ಇಲಾಖೆ ಮೇಲಿರುತ್ತೆ. ಆದ್ರೆ,ಇಲ್ಲೊಬ್ಬ ಪೊಲೀಸ್ ಇಲಾಖೆಯ ಅಧಿಕಾರಿ ಪೊಲೀಸ್ ಇಲಾಖೆಗೆ ಕಳಂಕ ತರುವ ಕೆಲಸ ಮಾಡಿದ್ದಾನೆ.

ಸಂಬಂಧದಲ್ಲಿ ಮಗಳಾಗುವ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದು ಬುದ್ಧಿ ಹೇಳಲು ಹೋದ ಮಗನ ಮೇಲೆ ಪೊಲೀಸರಿಂದಲೇ ಮಾರಣಾಂತಿಕ ಹಲ್ಲೆ ಮಾಡಿಸಿದ್ದಾನೆ. ರಾಹುಲ್ ಎಂಬಾತನೇ ಹಲ್ಲೆಗೆ ಒಳಗಾದ ಯುವಕ. ಈತ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಕೊಣ್ಣೂರ ಗ್ರಾಮದವ. ಸದ್ಯ ಬೆಳಗಾವಿ ಖಾಸಗಿ ಪತ್ರಿಕೆಯಲ್ಲಿ ಕೆಲಸ ಮಾಡಿಕೊಂಡಿರುವ ರಾಹುಲ್ ಬೆಳಗಾವಿಯ ವೈಭವ ನಗರದಲ್ಲಿ ಹೆಂಡತಿಯೊಂದಿಗೆ ವಾಸವಾಗಿದ್ದಾರೆ. ಈತನ ತಂದೆ ಗೋಕಾಕ ತಾಲೂಕಿನ ಕುಲಗೋಡ ಪೊಲೀಸ್ ಠಾಣೆಯ ಪಿಎಸ್‌ಐ ಆಗಿ ಕೆಲಸ ಮಾಡುತ್ತಿದ್ದು ಆತನ‌ ಹೆಸರು ಸಿದ್ದಪ್ಪ ಕರನಿಂಗ್. ಇವರ ಮೇಲೆ ಇದೀಗ ಆರೋಪ ಕೇಳಿ ಬಂದಿದೆ.

Share News

About BigTv News

Check Also

ಯುವತಿ ಕುತ್ತಿಗೆಗೆ ಚಾಕು ಇಟ್ಟು ಸರ ದರೋಡೆ ಯತ್ನ: ಕಿಡಿಗೇಡಿ ಬಂಧನ

ಬೆಂಗಳೂರು: ಇಂದಿರಾನಗರದ ಅಂಗಡಿಯೊಂದಕ್ಕೆ ನುಗ್ಗಿ ಯುವತಿಯ ಕುತ್ತಿಗೆಗೆ ಚಾಕು ಇಟ್ಟು ಚಿನ್ನದ ಸರ ದರೋಡೆಗೆ ಯತ್ನಿಸಿದ ಪ್ರಭುರಾಜ್ (40) ಎಂಬಾತನನ್ನು …

Leave a Reply

Your email address will not be published. Required fields are marked *