Breaking News

ಇಲಾಖಾ ತನಿಖಾ ವಿಚಾರಣೆ ವೇಳೆ ಸುಳ್ಳು ಹೇಳಿಕೆ ಆರೋಪ : 5 ಪೊಲೀಸ್‌ ಕಾನ್ಸ್​ಟೇಬಲ್​​ ಅಮಾನತು


ವಿಜಯನಗರ: ಅಮಾನತಾದ ಪೊಲೀಸ್‌ ಕಾನ್ಸ್​ಟೇಬಲ್​ಗೆ ಸಹಕಾರಿಯಾಗುವಂತೆ ಇಲಾಖಾ ತನಿಖಾ ವಿಚಾರಣೆ ವೇಳೆ ಸುಳ್ಳು ಹೇಳಿದ್ದ ಐವರು ಪೊಲೀಸ್‌ ಕಾನ್ಸ್​ಟೇಬಲ್​​ಗಳನ್ನು ಅಮಾನತುಗೊಳಿಸಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಅರುಣ್‌ ಕೆ ಆದೇಶ ಹೊರಡಿಸಿದ್ದಾರೆ.

ಕೊಟ್ಟೂರು ಪೊಲೀಸ್‌ ಠಾಣೆಯ ಕಾನ್ಸ್​ಟೇಬಲ್‌ಗಳಾದ ಕವಿತಾ ಬಾಯಿ, ತಿಪ್ಪಣ್ಣ, ಹೆಚ್ ಬಸವರಾಜ್, ಪತ್ರಿ ಕುಮಾರ್ ಹಾಗೂ ಬಸವರಾಜ ಅಮಾನತುಗೊಂಡವರು.

ಅಕ್ರಮ ಮರಳು ಸಾಗಣೆ ಮಾಡುವವರ ಮೇಲೆ ನಿಗಾ ವಹಿಸುವಂತೆ ಸೂಚನೆ ನೀಡಿದರೂ ಪಾಲನೆ ಮಾಡಿಲ್ಲ ಹಾಗೂ ವರ್ಗಾವಣೆ ಮಾಡಿಸುತ್ತೇನೆ ಎಂದು ಪಿಎಸ್​ಐಗೆ ಧಮ್ಕಿ ಹಾಕಿದ್ದಾರೆ ಎಂಬ ಆರೋಪದ ಮೇಲೆ ಕೊಟ್ಟೂರು ಪೊಲೀಸ್ ಠಾಣೆಯ ಕಾನ್ಸ್​​ಟೇಬಲ್​​ ಕೊಟ್ರಗೌಡ ಅಮಾನತುಗೊಂಡಿದ್ದರು. ಬಳಿಕ ಅವರ ವಿರುದ್ಧ ಡಿವೈಎಸ್​ಪಿ ಹಾಲ ಮೂರ್ತಿರಾವ್ ಸಮ್ಮುಖದಲ್ಲಿ ನಡೆದ ಇಲಾಖೆ ವಿಚಾರಣೆಯಲ್ಲಿ ಐವರು ಪೊಲೀಸರು, ಕೊಟ್ರಗೌಡ ಅವರಿಗೆ ಸಹಕಾರಿಯಾಗುವಂತೆ ಸುಳ್ಳು ಹೇಳಿದ್ದರು. ಅಮಾನತುಗೊಂಡ ಕಾನ್ಸ್​ಟೇಬಲ್ ಪರವಾಗಿ ನೈಜತೆ ಮುಚ್ಚಿಟ್ಟು ತನಿಖಾಧಿಕಾರಿಗಳ ದಿಕ್ಕು ತಪ್ಪಿಸಿದ್ದರು. ಬಳಿಕ ತನಿಖಾಧಿಕಾರಿ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದ ಸಭೆಯ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಕೊಟ್ರಗೌಡ ಅವರು ದುರ್ವರ್ತನೆ ತೋರಿರುವುದು ಗೊತ್ತಾಗಿದೆ. ಸತ್ಯ ಗೊತ್ತಿದ್ದರೂ ಸುಳ್ಳು ಹೇಳಿ ದುರ್ವರ್ತನೆ, ಅಶಿಸ್ತು ತೋರಿದ್ದ ಐವರು ಪೊಲೀಸರನ್ನು ಅಮಾನತಗೊಳಿಸಿದ್ದೇವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್‌ ಕೆ.ತಿಳಿಸಿದ್ದಾರೆ.

Share News

About BigTv News

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *