Breaking News

ಒಂದೇ ದಿನದಲ್ಲಿ 777 ಚಾರ್ಲಿ ಕಲೆಕ್ಷನ್ ಎಷ್ಟು ಗೊತ್ತಾ?


777 ಚಾರ್ಲಿ ಸಿನಿಮಾ ನಿನ್ನೆ ಬಿಡುಗಡೆಯಾಗಿ ಒಳ್ಳೆಯ ಪ್ರತಿಕ್ರಿಯೆ ಪಡೆಯುತ್ತಿದೆ. ನಾಯಿ ಹಾಗೂ ಮನುಷ್ಯನ ನಡುವಿನ ಸಂಬಂಧವನ್ನು ಅದ್ಭುತವಾಗಿ ಚಿತ್ರಿಸಿರುವ ಈ ಸಿನಿಮಾ ಎಲ್ಲರನ್ನು ಭಾವುಕಗೊಳಿಸಿದೆ.6 ಕೋಟಿಗಿಂತ ಹೆಚ್ಚು ಕಲೆಕ್ಷನ್ ಮಾಡಿದಿಯಂತೆ ಸಿನಿಮಾ ಎನ್ನಲಾಗಿದೆ.‌

ವಿಶ್ವದಾದ್ಯಂತ 777 ಚಾರ್ಲಿ’ ಸಿನಿಮಾ ಮೊದಲ ದಿನವೇ ಸರಿ ಸುಮಾರು 6-10 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎಂದು ಬಾಕ್ಸ್ ಆಫೀಸ್​ ಕಲೆಕ್ಷನ್ ವರದಿ ಮಾಡಿದೆ. ಆದರೆ ಈ ಬಗ್ಗೆ ಚಿತ್ರತಂಡ ಯಾವುದೇ ಮಾಹಿತಿ ನೀಡಿಲ್ಲ. ಬಾಕ್ಸ್ ಆಫೀಸ್​ ಕಲೆಕ್ಷನ್ ಪ್ರಕಾರ ಚಾರ್ಲಿ ಗಳಿಕೆ ಚೆನ್ನಾಗಿದ್ದು, ಇಂದು ವೀಕೆಂಡ್​ ಆಗಿರುವುದರಿಂದ ಹೆಚ್ಚಿನ ಕಲೆಕ್ಷನ್ ಮಾಡಬಹುದು ಎಂದು ಅಂದಾಜಿಸಲಾಗಿದೆ. ಈ ಚಿತ್ರಕ್ಕೆ ಉತ್ತಮ ರಿವ್ಯೂ ಬಂದಿದ್ದು ಸಿನಿ ಪ್ರಿಯರು ಈ ಚಿತ್ರವನ್ನು ವಿಮರ್ಶೆ ಮಾಡಲು ಸಾಧ್ಯವಿಲ್ಲ. ಮಾಡಲೂ ಬಾರದು. ಇದರಲ್ಲಿ ತಪ್ಪು ಹುಡುಕಲು ಸಾಧ್ಯವಿಲ್ಲ ಎಂದಿದ್ದಾರೆ. ಬಹಳ ಎಮೋಷನ್ ಸಿನಿಮಾ ಇದಾಗಿದ್ದು, ನಾಯಿಯನ್ನು ಇಷ್ಟಪಡದವರೂ ಕೂಡ ಭಾವುಕರಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

Share News

About BigTv News

Check Also

ಬೆಂಗಳೂರು: ಪಬ್‌ನಲ್ಲಿ ಲೈಟರ್ ಕೇಳಿ ಪರಿಚಯವಾದ ರಾಜಸ್ಥಾನದ ಯುವತಿಯ ಹೋಟೆಲ್‌ಗೆ ಕರೆದೊಯ್ದು ಅತ್ಯಾಚಾರ ಎಸಗಿದ ಆರೋಪಿಯ ಬಂಧನ

ಬೆಂಗಳೂರು: ರಾಜಸ್ಥಾನದ ಜೈಪುರದಿಂದ ಬೆಂಗಳೂರಿಗೆ ಬಂದಿದ್ದ ಯುವತಿಯೊಬ್ಬರಿಗೆ ಕೋರಮಂಗಲದ ಪಬ್‌ನಲ್ಲಿ ಸಮೀರ್ ಎಂಬಾತ ಪರಿಚಯವಾಗಿದ್ದಾನೆ. ಸಿಗರೇಟ್ ಸೇದಲು ಲೈಟರ್ ಕೇಳಿದಾಗ …

Leave a Reply

Your email address will not be published. Required fields are marked *