Breaking News

ಸಾಲುಗಟ್ಟಿ ಮತಚಲಾವಣೆಗೆ ನಿಂತ ಶಿಕ್ಷಕರು : ಪೊಲೀಸ್ ಬಿಗಿ ಭದ್ರತೆ‌

ಹುಬ್ಬಳ್ಳಿ : ಪಶ್ಚಿಮ ಶಿಕ್ಷಕರ ಪರಿಷತ್ ಚುನಾವಣೆ ಮತದಾನ ಸರಿಯಾಗಿ 8 ಗಂಟೆಗೆ ಪ್ರಕ್ರಿಯೆ ಆರಂಭವಾಗಿದೆ. ಹುಬ್ಬಳ್ಳಿಯ ಎನ್.ಆರ್. ಬೊಮ್ಮಾಯಿ ದೇಸಾಯಿ ರೋಟರಿ ಶಾಲೆಯಲ್ಲಿನ ಮತಗಟ್ಟೆಯಲ್ಲಿ ಮತ ಚಲಾವಣೆಗೆ ಸಾಲುಗಟ್ಟಿ ಶಿಕ್ಷಕ ನಿಂತಿದ್ದಾರೆ.

ಸಾಯಂಕಾಲ 5 ಗಂಟೆಯ ವರೆಗೆ ಮತ ಚಲಾಯಿಸಲು ಅವಕಾಶ ನೀಡಲಾಗಿದೆ. ಪಶ್ಚಿಮ ಶಿಕ್ಷಕರ ಮತಕ್ಷೇತ್ರ ನಾಲ್ಕು ಜಿಲ್ಲೆಗಳ ವ್ಯಾಪ್ತಿ ಹೊಂದಿದೆ. ಧಾರವಾಡ, ಹಾವೇರಿ, ಗದಗ, ಉತ್ತರ ಕನ್ನಡ ಜಿಲ್ಲೆಗಳನ್ನೊಳಗೊಂಡಿದೆ. ಮತ ಚಲಾವಣೆ 17,973 ಮಾಡಲಿದ್ದಾರೆ. ಇವರಲ್ಲಿ 10,983 ಪುರುಷ ಹಾಗೂ 6,990 ಮಹಿಳಾ ಮತದಾರರಾಗಿದ್ದಾರೆ. ಧಾರವಾಡ -21, ಉತ್ತರ ಕನ್ನಡ-15, ಹಾವೇರಿ-26, ಗದಗ- 14 ಸೇರಿದಂತೆ ಹೆಚ್ಚುವರಿಯಾಗಿ ಒಂದು ಮತಗಟ್ಟೆ ಸ್ಥಾಪನೆ ಮಾಡಲಾಗಿದೆ. ಶಾಂತಿಯುತ ಮತದಾನಕ್ಕೆ ಪೊಲೀಸ್ ಬಿಗಿ ಭದ್ರತೆ‌ ಒದಗಿಸಲಾಗಿದೆ.
ಮತದಾನಕ್ಕೆ ಆಗಮಿಸಿದ ಶಿಕ್ಷಕರಿಗೆ ಮಾಸ್ಕ್ ನೀಡುತ್ತಿರುವ ಚುನಾವಣಾ ಸಿಬ್ಬಂದಿ ನೀಡುತ್ತಿದ್ದಾರೆ.

Share News

About BigTv News

Check Also

ಬೆಂಗಳೂರಲ್ಲಿ ನಕಲಿ ಡೇಟಿಂಗ್ ಬಲೆ, 20 ಲಕ್ಷ ರೂ. ಮೌಲ್ಯದ ಚಿನ್ನ ಲೂಟಿ

ಬೆಂಗಳೂರು: ಚಂದ್ರಾ ಲೇಔಟ್‌ನಲ್ಲಿ ಡೇಟಿಂಗ್ ಆಯಪ್ ಮೂಲಕ ಪರಿಚಯವಾದ ವ್ಯಕ್ತಿಯನ್ನು ಮನೆಗೆ ಕರೆಸಿಕೊಂಡ ಯುವಕನಿಗೆ ಚಾಕು ತೋರಿಸಿ ಬೆದರಿಸಿ, 226 …

Leave a Reply

Your email address will not be published. Required fields are marked *