Breaking News

ಮಾದಕವಸ್ತು ಮಾರಾಟ ಜಾಲ ನಡೆಸುತ್ತಿದ್ದ ದಾವೂದ್‌ ಸಹಚರ ಗೋವಾದಲ್ಲಿ ಸೆರೆ

ದೇಶಭ್ರಷ್ಟ ಭೂಗತ ಪಾತಕಿ ದಾವೂದ್‌ ಇಬ್ರಾಹಿಂನ ಸಹಚರ ಮತ್ತು ಮಾದಕ ವಸ್ತು ಸಿಂಡಿಕೇಟ್‌ನ ಕಿಂಗ್‌ಪಿನ್‌ ಡ್ಯಾನಿಶ್‌ ಚಿಕ್ನಾ ಸೇರಿ ನಾಲ್ವರನ್ನು ಮಾದಕ ವಸ್ತು ನಿಯಂತ್ರಣ ಬ್ಯುರೋ (ಎನ್‌ಸಿಬಿ) ಅಧಿಕಾರಿಗಳು ಗೋವಾದಲ್ಲಿ ಬಂಧಿಸಿದ್ದಾರೆ ಎಂದು ಬುಧವಾರ ಅಧಿಕಾರಿಗಳು ತಿಳಿಸಿದ್ದಾರೆ.ಈ ವೇಳೆ ಬಂಧಿತರಿಂದ 1.34 ಕೆ.ಜಿ. ಮೆಫೆಡ್ರೋನ್ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ತನಿಖೆ ವೇಳೆ ಕಿಂಗ್‌ಪಿನ್ ಡ್ಯಾನಿಶ್ ಮತ್ತು ಅವನ ಪತ್ನಿ ಮಾದಕವಸ್ತು ಸಿಂಡಿಕೇಟ್ ಅನ್ನು ನಡೆಸುತ್ತಿದ್ದರು ಎಂದು ಗುರುತಿಸಲಾಗಿದೆ. ಈ ನಡುವೆ ಅವರನ್ನು ಪತ್ತೆ ಹಚ್ಚಬಾರದು ಎಂದು ಅನೇಕ ರಾಜ್ಯಗಳಿಗೆ ಓಡಿ ಹೋಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಡ್ಯಾನಿಶ್‌ ವಿರುದ್ಧ ಮಹಾರಾಷ್ಟ್ರ ಹಾಗೂ ರಾಜಸ್ಥಾನದಲ್ಲಿ ಅನೇಕ ಪ್ರಕರಣಗಳು ದಾಖಲಾಗಿವೆ.

Share News

About BigTv News

Check Also

ಇ-ಖಾತೆಗಾಗಿ ₹50 ಸಾವಿರ ಲಂಚಕ್ಕೆ ಬೇಡಿಕೆ; ಮೊದಲ ಕಂತು ಪಡೆಯುವಾಗ ನಗರಸಭೆ ಸಿಬ್ಬಂದಿ ಲೋಕಾಯುಕ್ತ ಬಲೆಗೆ

ಶಿಡ್ಲಘಟ್ಟ: ಇ-ಖಾತೆ ಮಾಡಿಕೊಡಲು ₹50 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು, ಮೊದಲ ಕಂತಿನ ₹25,500 ಸ್ವೀಕರಿಸುತ್ತಿದ್ದ ನಗರಸಭೆಯ ಎಸ್‌ಡಿಎ ನಾಗರಾಜ್ …

Leave a Reply

Your email address will not be published. Required fields are marked *