ಚಾಮರಾಜನಗರ:ರಾಜಕಾರಣದಲ್ಲಿ ಗೆದ್ದಂತಹ ಶಾಸಕರಿಗೆ ಪಕ್ಷ ನಿಷ್ಠೆ ಇರಬೇಕು. ಇತ್ತೀಚಿನ ಈ ಬೆಳವಣಿಗೆಗಳು ಬಹಳ ನೋವು ತರುವಂತಹದ್ದು ಎಂದು ಮಾಜಿ ಸಂಸದ ಆರ್.ಧ್ರುವನಾರಾಯಣ್ ಹೇಳಿದ್ದಾರೆ.ಹನೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೊದಲ ಬಾರಿಗೆ ಗೆದ್ದು ಅಧಿಕಾರಕ್ಕಾಗಿ ಹಪಹಪಿಸುವುದು ಸರಿಯಲ್ಲ,ಕ್ಷೇತ್ರದ ಅಭಿವೃದ್ಧಿ ಮತ್ತು ಪಕ್ಷಕ್ಕೆ ಗೌರವ ಕೊಡಬೇಕು. ಇದರಿಂದ ಜನರಿಗೂ ಸಹ ರಾಜಕಾರಣಿಗಳ ಮೇಲೆ ವಿಶ್ವಾಸ ಇರುತ್ತದೆ.ಮೂರು- ನಾಲ್ಕು ಬಾರಿ ಗೆದ್ದಿರುವವರಿಗೂ ಅಧಿಕಾರದ ಮೇಲೆ ಆಸೆ ಇರುತ್ತೆ, ಆದ್ರೂ ಪಕ್ಷಕ್ಕೆ ನಿಷ್ಠೆಯಿಂದ ಇದ್ದಾರೆ ಎಂದರು.ಅನಿಲ್ ಚಿಕ್ಕಮಾದು ರಾಜಿನಾಮೆ ವಿಚಾರಕ್ಕೆ ಸಂಬಂಧಿಸಿದಂತೆ ಕೇಳಲಾದ ಪ್ರಶ್ನೆಗೆ ಉತ್ತರಿಸುದ ಅವರು, ಅನಿಲ್ ಚಿಕ್ಕಮಾದು ಯಾವುದೇ ಕಾರಣಕ್ಕೂ ಪಕ್ಷ ಬಿಡುವುದಿಲ್ಲ. ಅದನ್ನ ಅವರೇ ಸ್ಪಷ್ಟ ಪಡಿಸಿದ್ದಾರೆ. ನಾನು ಕಾಂಗ್ರೆಸ್ ನಿಂದ ಗೆದ್ದಿದ್ಧೇನೆ, ಪಕ್ಷಕ್ಕೆ ನಿಷ್ಠೆಯಿಂದ ಇರುತ್ತೇನೆ ಎಂದಿದ್ದಾರೆ.ಸರ್ಕಾರ ಉಳಿಯುತ್ತೋ, ಉರುಳುತ್ತೋ ಅದು ಸ್ಪೀಕರ್ ಬಂದಮೇಲೆ ಗೊತ್ತಾಗುತ್ತದೆ.ಸ್ಪೀಕರ್ ರವರು ರಾಜೀನಾಮೆಯನ್ನ ಇನ್ನೂ ಅಂಗೀಕಾರ ಮಾಡಿಲ್ಲ. ಹಾಗಾಗಿ ನಮ್ಮ ರಾಷ್ಟೀಯ ನಾಯಕರಾದ ಖರ್ಗೆ, ಸಿದ್ದರಾಮಯ್ಯ ರವರು ರಾಜಿನಾಮೆ ಕೊಟ್ಟಿರುವವರ ಜೊತೆ ಮಾತಕತೆಯಲ್ಲಿದ್ದಾರೆ ಎಂದು ಧುವನಾರಾಯಣ್ ತಿಳಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





