Breaking News

ಚಾಮರಾಜನಗರ ನಂದು ಎಂದು ಹೇಳುವ ಮೂಲಕ ತವರೂರಿನ ಅಭಿಮಾನ ಮೆರೆದ ಹ್ಯಾಟ್ರಿಕ್ ಹೀರೋ


ಚಾಮರಾಜನಗರ : ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ತಮ್ಮ ತವರೂರು ಚಾಮರಾಜನಗರಕ್ಕೆ ಬದಲಿಸಿಕೊಂಡು ಡೈಲಾಗ್ ಹೇಳುತ್ತಿದ್ದಂತೆ ನೆರೆದಿದ್ದ ಸಾವಿರಾರು ಜನರು ಹೋ.. ಎಂದು ಹರ್ಷೋದ್ಗಾರ ಮಾಡಿದರು. ಸಿಳ್ಳೆಗಳು ಮೊಳಗಿದವು, ಶಿವಣ್ಣಂಗೆ ಜೈ , ಪುನೀತ್ ಗೆ ಜೈ ಎಂಬ ಜೈಕಾರಗಳು ತಾರಕಕ್ಕೇರಿದವು.

ಭೈರಾಗಿ ಚಿತ್ರದ ಪೂರ್ವಭಾವಿ ಸಮಾರಂಭ (ಪ್ರಿ ಇವೆಂಟ್) ಹಿನ್ನೆಲೆಯಲ್ಲಿ ನಗರಕ್ಕೆ ಆಗಮಿಸಿದ ಕರುನಾಡ ಚಕ್ರವರ್ತಿ, ನಟ ಡಾ. ಶಿವರಾಜ್‌ಕುಮಾರ್ ಅವರು ಚಾಮರಾಜನಗರ ನಂದು ಎಂದು ಹೇಳುವ ಮೂಲಕ ತವರೂರಿನ ಅಭಿಮಾನ ಮೆರೆದರು.

ಶಿವಣ್ಣ ಆಗಮನದ ಹಿನ್ನೆಲೆಯಲ್ಲಿ ನಗರದ ಸಂತೇಮರಹಳ್ಳಿ ವೃತ್ತದಲ್ಲಿ ಡಾ.ಶಿವರಾಜ್ ಕುಮಾರ್ ಅಭಿಮಾನಿ ಬಳಗ ಹಾಗೂ ಅವರ ಸಾವಿರಾರು ಅಭಿಮಾನಿಗಳು ಭೈರಾಗಿ ಚಿತ್ರತಂಡವನ್ನು ಅದ್ಧೂರಿಯಾಗಿ ಬರಮಾಡಿಕೊಂಡರು. ಜೆಸಿಬಿ ಮೂಲಕ ಬೃಹತ್ ಗಾತ್ರದ ಸುಮಾರು 200 ಕೆ.ಜಿಯ ಸೇಬಿನ ಹಾರ ಹಾಕಲಾಯಿತು. ಅಲ್ಲದೇ ಅಭಿಮಾನಿಗಳು ನೆಚ್ಚಿನ ನಟನಿಗೆ ಪುಷ್ಪ ವೃಷ್ಟಿ ಮಾಡುವ ಮೂಲಕ ಸಂಭ್ರಮಿಸಿದರು.

Share News

About BigTv News

Check Also

ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್‌ ದೂರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …

Leave a Reply

Your email address will not be published. Required fields are marked *