Breaking News

ಜಾರಕಿಹೊಳಿ 819 ಕೋಟಿ ಹಣ ಲೂಟಿ ಮಾಡಿದ್ದಾರೆ, ಅಮಿತ್ ಶಾ, ಪಡ್ನವೀಸ್ ಮತ್ತು ಬೊಮ್ಮಾಯಿ ಭಾಗಿ



ಬೆಂಗಳೂರು : ಮಾಜಿ ಸಚಿವ ರಮೇಶ್ ಜಾರಕಿಹೊಳಿ 819 ಕೋಟಿ ಹಣ ಲೂಟಿ ಮಾಡಿದ್ದಾರೆ. ಇದು ಸಾರ್ವಜನಿಕ ಹಣ, ಇದ್ರಲ್ಲಿ ಅಮಿತ್ ಶಾ, ಪಡ್ನವೀಸ್ ಮತ್ತು ಬೊಮ್ಮಾಯಿ ಭಾಗಿಯಾಗಿದ್ದಾರೆ. ಆದ್ರೆ ರಮೇಶ್ ಜಾರಕಿಹೊಳಿಗೆ ಇನ್ನೂ ನೋಟಿಸ್ ನೀಡಿಲ್ಲ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಆರೋಪಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಂ. ಲಕ್ಷ್ಮಣ, ಸೌಭಾಗ್ಯ ಲಕ್ಷ್ಮಿ ಶುಗರ್ ನಲ್ಲಿ ಮಗ, ಮಗಳು, ಸೊಸೆ ಮತ್ತು ರಮೇಶ್ ಸೇರಿ ಎಂಟು ಜನ ಈ ಪ್ರಮುಖರು. ಸೌಭಾಗ್ಯ ಲಕ್ಷ್ಮಿ ಶುಗರ್ ಅವರೇ ಬರೆದಿರುವ ದಾಖಲೆ ಬಿಡುಗಡೆ ಮಾಡ್ತಾ ಇದ್ದೇನೆ. 2019 ರಲ್ಲಿ ಸೌಭಾಗ್ಯ ಲಕ್ಷ್ಮಿ ಶುಗರ್ ಗೆ ನೊಟೀಸ್ ಕೊಡ್ತಾರೆ. ಅಫೆಕ್ಸ್ ಬ್ಯಾಂಕ್ ರಮೇಶ್ ಗೆ ನೊಟೀಸ್ ನೀಡ್ತಾರೆ. ಅದರ ಅಧ್ಯಕ್ಷ ಬೆಳ್ಳಿ ಪ್ರಕಾಶ್, ನೀವು ಪಡೆದ ಸಾಲ ಹಿಂದುರಿಗಿಸಿದ ಹಿನ್ನಲೆ ನಿಮ್ಮ ಆಸ್ತಿ ಮುಟ್ಟುಗೋಲು ಹಾಕಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿಗಳಿಗೆ ನೊಟೀಸ್ ಕೊಡ್ತಾರೆ. ಆದ್ರೆ, ಜಿಲ್ಲಾಧಿಕಾರಿ ಇಲ್ಲಿ ತನಕ ಏನು ಮಾಡಿಲ್ಲ ಎಂದರು.

Share News

About BigTv News

Check Also

ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್‌ ದೂರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …

Leave a Reply

Your email address will not be published. Required fields are marked *