ಸಾಗರ : ರಾಜರತ್ನ ಪುನೀತ್ ರಾಜ್ಕುಮಾರ್ ಅಭಿಮಾನಿಗಳು ಅವರ ಸ್ಮಾರಕ ನಿರ್ಮಾಣ ಮಾಡಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ತಳಗೆರೆ ಗ್ರಾಮದಲ್ಲಿ ಅಭಿಮಾನಿಗಳು ನೆಚ್ಚಿನ ನಟ ಪುನೀತ್ ರಾಜ್ಕುಮಾರ್ ಸ್ಮಾರಕ ನಿರ್ಮಿಸಿದ್ದಾರೆ. ಅಗಲಿದ ಅಪ್ಪುವಿನ ನೆನಪಿಗೆ ಗ್ರಾಮಸ್ಥರು ಸ್ಮಾರಕ ನಿರ್ಮಾಣ ಮಾಡಿದ್ದು, ವಿಶೇಷ ಗೌರವ ನೀಡಿದ್ದಾರೆ.
ಅತ್ಯಾಕರ್ಷಕವಾಗಿ ಸ್ಮಾರಕವನ್ನು ಪುನೀತ್ ಅಭಿಮಾನಿಗಳು ನಿರ್ಮಿಸಿದ್ದು, ಜೊತೆಗೆ ಕಾರಂಜಿಯನ್ನು ಸಹ ನಿರ್ಮಾಣ ಮಾಡಿದ್ದಾರೆ. ಗ್ರಾಮದವರೆಲ್ಲರೂ ಸೇರಿ ಈ ಅದ್ಭುತ ಕಾರ್ಯವನ್ನು ಮಾಡಿದ್ದು, ಗ್ರಾಮದ ಹಿರಿಯರಿಂದಲೇ ಸ್ಮಾರಕ ಉದ್ಘಾಟನೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಅಭಿಮಾನಿಗಳು ಪುನೀತ್ ನೆನೆದು ಅವರ ಅದ್ಭುತ ಕೆಲಸಗಳನ್ನು ಗುಣಗಾನ ಮಾಡಿದ್ದು, ಪುನೀತ್ ಮರೆಯಲಾಗದ ಮಾಣಿಕ್ಯ ಎಂದು ಗ್ರಾಮಸ್ಥರು ಕೊಂಡಾಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





