Breaking News

ಅಭಿಮಾನಿಗಳಿಂದ ಅರ್ಥಪೂರ್ಣವಾಗಿ ಶಾಸಕ ಡಾ.ನಾರಾಯಣಗೌಡರ ಜನ್ಮದಿನ ಆಚರಣೆ

ಮಂಡ್ಯ: ಶಾಸಕ ಡಾ. ನಾರಾಯಣಗೌಡ ಅವರ 57 ನೇ ಹುಟ್ಟು ಹಬ್ಬದ ಅಂಗವಾಗಿ ಅಭಿಮಾನಿಗಳುಜಿಲ್ಲೆಯ ಕೆ.ಆರ್.ಪೇಟೆ ಪಟ್ಟಣದ ದುಂಡಶೆಟ್ಟಿಲಕ್ಷ್ಮಮ್ಮ ಸ್ಮಾರಕ ಸಾರ್ವಜನಿಕ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಿಸಿ ಸಂಭ್ರಮಿಸಿದರು.ಶಾಸಕ ನಾರಾಯಣಗೌಡರ ಅಭಿಮಾನಿಗಳ ಬಳಗದ ಅಧ್ಯಕ್ಷ ಚಂದ್ರಮೋಹನ್ ನೇತೃತ್ವದಲ್ಲಿ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಶಾಸಕರ ಮನೆಯ ಮುಂಭಾಗದಲ್ಲಿ ಕೇಕ್ ಕತ್ತರಿಸಿ ಶಾಸಕರಿಗೆ ಶುಭಕೋರಿದರು. ಮೆಚ್ಚಿನ ಶಾಸಕನ ಹುಟ್ಟು ಹಬ್ಬದ ಕಾರಣ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು.ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಗಿರೀಶ್, ಶೋಭಾ ದಿನೇಶ್, ಶುಭಾಗಿರೀಶ್, ಇಂದ್ರಾಣಿ ಸತೀಶ್, ಪದ್ಮಾರಾಜು, ಶ್ರೀನಿವಾಸಕೇಸರಿ, ಕರ್ತೇನಹಳ್ಳಿ ಸುರೇಶ್, ಮಂಜುನಾಥ ಗೌಡ, ಪುರಸಭೆಯ ಮಾಜಿಸದಸ್ಯ ಕೆ.ಆರ್.ವಿನೋದ್ ಕುಮಾರ್, ಶಾಸಕರ ಆಪ್ತಸಹಾಯಕ ದಯಾನಂದ, ಹೊಸಳ್ಳಿ ನಾಗೇಶ್, ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಜನಾರ್ಧನ, ಡಾ.ರವಿ, ಸೇರಿದಂತೆ ನೂರಾರು ಕಾರ್ಯಕರ್ತರು ಹುಟ್ಟು ಹಬ್ಬದ ಸಂಭ್ರಮದಲ್ಲಿ ಭಾಗವಹಿಸಿದ್ದರು.

Share News

About admin

Check Also

ಒಂದು ಬೆಕ್ಕಿನ ಗರ್ಭ… ಎರಡು ಮನೆಗಳ ಗಲಾಟೆ! ಕೊನೆಗೆ ಪೊಲೀಸರೇ ‘ವಿಚಿತ್ರ ತೀರ್ಪು’ ಕೊಟ್ಟ ಕಥೆ!

ನಾಲ್ಕು ಮರಿಗಳು ಹುಟ್ಟಿದವು… ಆದರೆ ಕಸ್ಟಡಿ ಯಾರಿಗೆ..? ಪೊಲೀಸರನ್ನೇ ಕಂಗೆಡಿಸಿದ ಪ್ರಕರಣ! ಬೆಕ್ಕು ಗರ್ಭಿಣಿ… ನೆರೆಹೊರೆಯವರ ಗಲಾಟೆ! ಬೆಂಗಳೂರಿನಲ್ಲಿ ‘ವಿಚಿತ್ರ’ …

Leave a Reply

Your email address will not be published. Required fields are marked *