Breaking News

ಕಂಟ್ರೋಲ್​ ಮಾಡದೆ ಹೋದ್ರೆ ನಿನ್​ ಹೆಂಡ್ತೀನೂ ಓಡಿ ಹೋಗ್ತಾಳೆ : ಈಶ್ವರಪ್ಪ ಲೇವಡಿ


ಕಲಬುರಗಿ: ನೀವು ನೆಟ್ಟಗೆ ಇಟ್ಟುಕೊಂಡು ಕಂಟ್ರೋಲ್​ ಮಾಡದೆ ಹೋದ್ರೆ ನಿನ್​ ಹೆಂಡ್ತೀನೂ ಓಡಿ ಹೋಗ್ತಾಳೆ ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ವಿರುದ್ಧ ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪ ಲೇವಡಿ ಮಾಡಿದ್ದಾರೆ. ಠಾಕ್ರೆ ವಿರುದ್ಧ ಕೆಂಡಕಾರುವ ಭರದಲ್ಲಿ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ಯಾವ ಪಕ್ಷದಲ್ಲಿ ಶಿಸ್ತು, ನಾಯಕತ್ವ ಇರುವುದಿಲ್ಲವೋ ಆ ಪಕ್ಷ ಪ್ರಜಾಪ್ರಭುತ್ವದಲ್ಲಿ ಉಳಿಯುವುದಿಲ್ಲ ಎಂದು ಮಹಾರಾಷ್ಟ್ರದಲ್ಲಿನ ರಾಜಕೀಯ ವಿದ್ಯಮಾನಗಳ ಕುರಿತು ವಿಶ್ಲೇಷಿಸಿದರು. ಸಿಎಂ ಸ್ಥಾನಕ್ಕಾಗಿ ಬಾಳಾಸಾಹೇಬ್​ ಠಾಕ್ರೆ ಮಗ ಉದ್ಧವ್​ ಹಿಂದುತ್ವವನ್ನೇ ಮಾರಾಟ ಮಾಡಿದರು. ಈಗ ನೋಡಿದರೆ ಶಿವಸೇನೆ ಶಾಸಕರನ್ನು ಹೈಜಾಕ್​ ಮಾಡಲಾಗಿದೆ ಎಂದು ಹೇಳುತ್ತಿದ್ದಾರೆ. ಕೇವಲ ಶಾಸಕರಷ್ಟೇ ಅಲ್ಲ, ನಿನ್ನ ಹೆಂಡತಿಯನ್ನೂ ಕಂಟ್ರೋಲ್​ ಮಾಡೋಕೆ ಆಗದಿದ್ದರೆ ಓಡಿಹೋಗ್ತಾಳೆ ಎಂದು ಠಾಕ್ರೆಗೆ ಲೇವಡಿ ಮಾಡಿದರು.

Share News

About BigTv News

Check Also

ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್‌ ದೂರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …

Leave a Reply

Your email address will not be published. Required fields are marked *