Breaking News

ವರುಣನ ಆರ್ಭಟ: ಮನೆಗಳು ಕುಸಿತ, ಗದ್ದೆಗಳಿಗೆ ನುಗ್ಗಿದ ನೀರು


ಚಿಕ್ಕಮಗಳೂರು: ಜಿಲ್ಲೆಯ ವಿವಿಧೆಡೆ ಬುಧವಾರ ಬಿರುಸಾಗಿ ಮಳೆ ಸುರಿದಿದೆ. ಮೂಡಿಗೆರೆ ತಾಲ್ಲೂಕಿನ ಬೆಟ್ಟಗೆರೆ, ಬಣಕಲ್‌ ವಿಲೇಜ್‌, ಗೋಣಿಬೀಡಿನಲ್ಲಿ ಮೂರು ಮನೆಗಳ ಗೋಡೆಗಳು ಕುಸಿದಿವೆ.

ಮೂಡಿಗೆರೆ ತಾಲ್ಲೂಕಿನ ಮುಗ್ರಹಳ್ಳಿ, ಹಂತೂರು, ಉಗ್ಗೆಹಳ್ಳಿ, ಊರುಬಗೆ, ಫಲ್ಗುಣಿ ಭಾಗದಲ್ಲಿ ಗದ್ದೆ ನಾಟಿಗಾಗಿ ನಿರ್ಮಿಸಿದ್ದ ಸಸಿಮಡಿಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಭತ್ತದ ಗದ್ದೆಗಳು ಜಲಾವೃತವಾಗಿದ್ದು, ಎಸ್ಟೇಟ್ ಕುಂದೂರು, ಬೀಜುವಳ್ಳಿ, ಜನ್ನಾಪುರ ಭಾಗಗಳಲ್ಲಿ ಶುಂಠಿಗದ್ದೆಗೆ ನೀರು ನುಗ್ಗಿ ಹಾನಿಯಾಗಿದೆ.

ಚಿಕ್ಕಮಗಳೂರು, ಮೂಡಿಗೆರೆ, ಶೃಂಗೇರಿ, ಕಳಸ, ಕೊಪ್ಪ, ಎನ್‌.ಆರ್‌.ಪುರ ಭಾಗದಲ್ಲಿ ಸತತವಾಗಿ ಮಳೆ ಸುರಿದಿದೆ. ಶೃಂಗೇರಿ ತಾಲ್ಲೂಕಿನ ಕಿಗ್ಗಾ- 18.3, ಕಿಗ್ಗಾ- 14.2 ಸೆಂ.ಮೀ ಮಳೆಯಾಗಿದೆ.

Share News

About BigTv News

Check Also

ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್‌ ದೂರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …

Leave a Reply

Your email address will not be published. Required fields are marked *