Breaking News

ಧಾರವಾಡದ ಮೆಹಬೂಬನಗರದಲ್ಲಿ ಮತ್ತೊಂದು ಕೊಲೆ ಯತ್ನ


ಧಾರವಾಡ : ಹುಬ್ಬಳ್ಳಿ , ಧಾರವಾಡ ಅವಳಿನಗರದಲ್ಲಿ ಮೇಲಿಂದ ಮೇಲೆ ಕೊಲೆಗಳು , ಕೊಲೆ ಯತ್ನಗಳು ನಡೆಯುತ್ತಲೇ ಇವೆ . ಇತ್ತೀಚಿನ ಎರಡೂರು ದಿನಗಳಲ್ಲಿ ಕೊಲೆಗಳು ಹೆಚ್ಚಾಗಿವೆ . ಈಗ ಧಾರವಾಡದ ಮೆಹಬೂಬನಗರದಲ್ಲಿ ಮತ್ತೊಂದು ಕೊಲೆ ಯತ್ನ ನಡೆದಿದೆ .

ಈ ಕೊಲೆ ಯತ್ನದ ದೃಶ್ಯಾವಳಿಗಳು ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು , ಧಾರವಾಡಿಗರನ್ನು ಬೆಚ್ಚಿ ಬಿಳಿಸಿದೆ . ಇಟ್ಬಾಲ್ ಎಂಬಾತ ತನ್ನ ಸಹೋದರಿ ಮೇಲೆ ಹಲ್ಲೆ ನಡೆಸಿದ್ದಾನೆ . ಇವರಿಬ್ಬರೂ ಮೆಹಬೂಬ್‌ನಗರದ ದೊಡ್ಡಮನಿ ಹಾಲ್ ಎದುರಿಗೆ ನಿಂತಾಗ ಇಕ್ವಾಲ್ ಏಕಾಏಕಿ ತನ್ನ ಸಹೋದರಿ ತಲೆಗೆ ಸುತ್ತಿಗೆಯಿಂದ ಹೊಡೆದಿದ್ದಾನೆ . ಎರಡೂರು ಬಾರಿ ಆಕೆಯ ತಲೆಗೆ ಸುತ್ತಿಗೆಯಿಂದ ಹೊಡೆದಿದ್ದಾನೆ . ಕೂಡಲೇ ಅಲ್ಲಿದ್ದವರು ಬಂದು ಆತನನ್ನು ತಡೆದಿದ್ದಾರೆ .

ಕೆಳಗೆ ಬಿದ್ದಿದ್ದ ಆ ಮಹಿಳೆಯನ್ನು ಸ್ಥಳಿಯರೇ ಆಸ್ಪತ್ರೆಗೆ ದಾಖಲಿಸಿದ್ದು , ಆಕೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ . ಧಾರವಾಡ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ . ಹಣದ ವಿಚಾರಕ್ಕೆ ಸಂಬಂಧಿಸಿದಂತೆ ಈ ಹಲ್ಲೆ ನಡೆದಿದೆ ಎಂಬುದು ಗೊತ್ತಾಗಿದೆ .

Share News

About BigTv News

Check Also

ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್‌ ದೂರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …

Leave a Reply

Your email address will not be published. Required fields are marked *