Breaking News

ನಿಗಮ ಮಂಡಳಿ ಅಧ್ಯಕ್ಷ- ಉಪಾಧ್ಯಕ್ಷರ ರಾಜೀನಾಮೆಗೆ ಸಿಎಂ ಮೌಖಿಕ ಸೂಚನೆ


ಬೆಂಗಳೂರು: ನಿಗಮ- ಮಂಡಳಿ ಅಧ್ಯಕ್ಷ- ಉಪಾಧ್ಯಕ್ಷರ ರಾಜೀನಾಮೆಗೆ ಸಿಎಂ ಬಸವರಾಜ್ ಬೊಮ್ಮಾಯಿ ಮೌಖಿಕ ಸೂಚನೆ ನೀಡಿರುವುದು ಬಿ.ಎಸ್.ಯಡಿಯೂರಪ್ಪ ಬಣದ ಕಣ್ಣು ಕೆಂಪಾಗಿಸಿದೆ.

ಯಡಿಯೂರಪ್ಪ ವಿದೇಶ ಪ್ರವಾಸ ತೆರಳಿದ್ದ ವೇಳೆ ಕಂದಾಯ ಸಚಿವ ಆರ್.ಅಶೋಕ್ ಹಾಗೂ ಆಪ್ತ ಸಚಿವರ ಜತೆ ಸೇರಿ ನಿಗಮ – ಮಂಡಳಿಗೆ ಹೊಸ ಅಧ್ಯಕ್ಷ ಉಪಾಧ್ಯಕ್ಷರ ಹೊಸ ಪಟ್ಟಿ ತಯಾರಿಸಿದ್ದರು. ಯಡಿಯೂರಪ್ಪ ಆಗಮನದವರೆಗೂ ಕಾಯ್ದ ಸಿಎಂ ಬೊಮ್ಮಾಯಿ ಈಗ ಪಟ್ಟಿ ಬಿಡುಗಡೆಗೆ ಸಿದ್ದರಾಗಿದ್ದಾರೆ.

ನಿರ್ಗಮನಗೊಳ್ಳುವವರ ಪಟ್ಟಿಯಲ್ಲಿ ಯಡಿಯೂರಪ್ಪ ಬಣದವರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಪರಾಜಿತ ಅಭ್ಯರ್ಥಿಗಳು ಹಾಗೂ ಕಾರ್ಯಕರ್ತ ಮುಖಂಡರಿಗೆ ಯಡಿಯೂರಪ್ಪ ಕಾಲದಲ್ಲಿ ನಿಗಮ- ಮಂಡಳಿ ಸ್ಥಾನ ನೀಡಲಾಗಿತ್ತು.

Share News

About BigTv News

Check Also

ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್‌ ದೂರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …

Leave a Reply

Your email address will not be published. Required fields are marked *