Breaking News

ಸರ್ಕಾರಿ ಕಛೇರಿಗಳಲ್ಲಿ ವಿಡಿಯೋ ಚಿತ್ರೀಕರಣ ಮಾಡುವುದು ಕಾನೂನು ಬದ್ದ ನಿಯಮ ಬಾಹಿರವಲ್ಲ: ಕೃಷ್ಣ ರೆಡ್ಡಿ

ಹುಬ್ಬಳ್ಳಿ: ಸರ್ಕಾರಿ ಕಛೇರಿಗಳಲ್ಲಿ ವಿಡಿಯೋ ಚಿತ್ರೀಕರಣ ಮಾಡುವುದು ಕಾನೂನು ಬದ್ದ, ಅವುಗಳು ಯಾವವು ನಿಯಮ ಬಾಹಿರವಾಗಿ ಇರಲಿಲ್ಲ ಎಂಬುದನ್ನು ಇತ್ತಿಚೆಗೆ ಸರ್ಕಾರವೇ ಒಪ್ಪಿಕೊಂಡು ಆದೇಶ ಹೊರಡಿಸಿದೆ. ಇದು ವಾಂಕಿ ಮಾಡಿ ನುಂಗಿದಂತಾಗಿದೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯಾಧ್ಯಕ್ಷ ರವಿ ಕೃಷ್ಣರೆಡ್ಡಿ ವ್ಯಂಗ್ಯವಾಡಿದರು.

ಹುಬ್ಬಳ್ಳಿಯಲ್ಲಿ ಕರ್ನಾಟಕ ಜನ ಚೈತನ್ಯ ಯಾತ್ರೆ ಕೈಗೊಂಡು ಮಾತನಾಡಿದ ಅವರು, ರಾಜ್ಯ ಸರ್ಕಾರ ಈ ಹಿಂದೆ ಸರ್ಕಾರಿ ಕಚೇರಿಯಲ್ಲಿ ವಿಡಿಯೋ ಚಿತ್ರೀಕರಣ ಮಾಡುವುದನ್ನು ನಿರ್ಬಂಧಿಸಿದ್ದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಹೋರಾಟವನ್ನು ಹತ್ತಿಕ್ಕಲು ಮಾಡಿದ ಹುನ್ನಾರ ಅಷ್ಟೇ ಅಲ್ಲದೇ ಮಾತಿನ ಸ್ವಾತಂತ್ರ್ಯವನ್ನು ಕಸಿಯೋದಕ್ಕೆ ಮಾಡಿದ ಮುಂದಿನ ಹೆಜ್ಜೆ ಆಗಿತ್ತು. ಇದಕ್ಕೆ ರಾಜ್ಯಾದ್ಯಂತ ವಿರೋಧ ವ್ಯಕ್ತವಾದ ಬೆನ್ನಲ್ಲೇ ಸರ್ಕಾರ ತಪ್ಪಿದ ಅರಿವಾಗಿ ಆದೇಶವನ್ನು ವಾಪಾಸ್ ಪಡೆದುಕೊಂಡಿದೆ ಎಂದರು.

ಇನ್ನು ರಾಜ್ಯದಲ್ಲಿ ಮೂರು ಪ್ರಮುಖ ಭ್ರಷ್ಟ ಸರ್ಕಾರಗಳಿವೆ. ಸಮೃದ್ಧ ಕರ್ನಾಟಕದಲ್ಲಿ ಅಸಮಾನತೆ, ನಿರುದ್ಯೋಗ, ಬಡತನ ಹೆಚ್ಚಾಗಿವೆ. ಇದನ್ನು ತೊಡದು ಹಾಕಲು ಕರ್ನಾಟಕ ರಾಷ್ಟ್ರ ಸಮಿತಿ ಮುಂದಾಗುತ್ತಿದೆ ಎಂದರು.

Share News

About BigTv News

Check Also

ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಅಪಹರಿಸಿ ವ್ಯಕ್ತಿ ಹತ್ಯೆ

ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಉಲ್ಬಣಗೊಂಡಿದ್ದು ಮೈತೇಯಿ ಸಮುದಾಯಕ್ಕೆ ಸೇರಿದ ವ್ಯಕ್ತಿಯನ್ನು ಶಂಕಿತ ಕುಕಿ ಸಮುದಾಯದ ಬಂಡುಕೋರರು ಅಪಹರಿಸಿ ಗುಂಡಿಕ್ಕಿ ಹತ್ಯೆ …

Leave a Reply

Your email address will not be published. Required fields are marked *