Breaking News

ಪ್ರಿತಿಸಿ ಮದುವೆ ಆದವನ್ನನ್ನೆ ಕೊಲೆಗೈದವಳು ಈಗ ಪೊಲೀಸರ ಅತಿಥಿ

ಬಾಗಲಕೋಟೆ: ಪ್ರೀತಿಸಿ ಮದುವೆಯಾದ ಯುವತಿಯೇ ಪ್ರೇಮಿಯನ್ನು ಕೊಲೆ ಮಾಡಿ,ಕೊನೆಗೆ ಪೊಲೀಸರ ಬಲೆಗೆ ಬಿದ್ದಿರುವ ಘಟನೆ ನಡೆದಿದೆ‌. ಇತ್ತೀಚೆಗೆ ಕಮತಗಿ ಬಳಿ ಸಾವಿಗೀಡಾದ ಬಾಗಲಕೋಟೆ ಯ ಪ್ರವೀಣ ಸೇಬಣ್ಣವರ (30) ಸಾವಿಗೆ ಸ್ಪೋಟಕ ತಿರುವು ಸಿಕ್ಕಿದೆ. ಅದು ಅಪ ಘಾತವಲ್ಲ. ಕೊಲೆ ಎಂಬುದು ಸಾಬೀತಾಗಿದೆ. ಮರ್ಡರ್ ಮಾಡಿದ ಆರೋಪಿ ಬೇರಾರು ಅಲ್ಲ,ತಾನೇ ಪ್ರೀತಿಸಿ ಮದುವೆ ಆಗಿದ್ದ ಸುಂದರ ಪತ್ನಿ,ಲವರ್ ಜೊತೆ ಸೇರಿ ಕೊಲೆ ಮಾಡಿರುವ ಆರೋಪದ ಮೇಲೆ ಈಗ ಕಂಬಿ ಎಣಿಸುವಂತಾಗಿದೆ.

ಅಕ್ರಮದ ಸಂಬಂಧ ಹಿನ್ನಲೆ, ಲವರ್ ಜೊತೆ ಸೇರಿ ಗಂಡನಿಗೆ ಕಾರು ಡಿಕ್ಕಿ ಹೊಡೆಸಿ ಕೊಲೆ ಮಾಡಿದ್ದಾರೆ. ಕಾರಿನಲ್ಲಿ ಬಂದ ಪತ್ನಿ ಹಾಗೂ ಲವರ್ ಪತಿಗೆ ಡಿಕ್ಕಿ ಹೊಡೆಸಿ ಪರಾರಿಯಾಗಿದ್ದರು.

ಆಗ ಸಾವನ್ನಪ್ಪಿದ ಪತಿ ಪತ್ನಿಗೆ ಕರೆ ಮಾಡಿ ನನಗೆ ಅಪಘಾತವಾಗಿದೆ ಎಂದು ಪೋನು ಮಾಡಿ, ತಿಳಿಸಿದ್ದಕ್ಕೆ, ಪತಿ ಇನ್ನು ಜೀವಂತ ಇದ್ದಾನೆ ಎಂದು ಮರಳಿ ಬಂದು ಮತ್ತೆ ಕಾರು ಹಾಯಿಸಿ, ಕೊಲೆ ಮಾಡಿರುವ ಬಗ್ಗೆ ತಪ್ಪು ಒಪ್ಪಿಕೊಂಡಿದ್ದಾಳೆ.
ಪುನಃ ಕಾರು ತಿರುವಿಕೊಂಡು ಬಂದು ಡಿಕ್ಕಿ ಹೊಡೆಸಿ ಗಂಡನ ಕೊಲೆ ಮಾಡಿ,ಜೀವ ಹೋಗಿರುವ ಬಗ್ಗೆ ಖಚಿತವಾದ ಮೇಲೆ ಪತ್ನಿ ತನ್ನ ಲವರ್ ಜೊತೆ ಎಸ್ಕೇಪ್ ಆಗಿದ್ದಳು.
ಹುನಗುಂದ ತಾಲೂಕಿನ,ಕಮತಗಿ ಕ್ರಾಸ್ ಬಳಿ ಜುಲೈ 2 ರಂದು ಮಧ್ಯರಾತ್ರಿ 12 ವರೆ ಸುಮಾರಿಗೆ ಈ ಘಟನೆ ನಡೆದಿದೆ.ಪ್ರವೀಣ ಸೇಬಣ್ಣವರ(30) ಕೊಲೆಯಾದ ವ್ಯಕ್ತಿಯಾಗಿದ್ದು,ಪತ್ನಿ ನಿತ್ಯಾ ಹಾಗೂ ಲವರ್ ರಾಘವೇಂದ್ರ ಅವರಿಂದ ಕೊಲೆ ಮಾಡಿರುವ ಬಗ್ಗೆ ಪೊಲೀಸರ ತನಿಖೆಯುಂದಾಗಿ ಬೆಳಕಿಗೆ ಬಂದಿದೆ. ಅಪಘಾತದಲ್ಲಿ ಮೃತಪಟ್ಟ ರೀತಿ ಶವ ಪತ್ತೆಯಾಗಿತ್ತು‌ಬೈಕ್ ಬಿದ್ದ ಜಾಗ, ಶವದ‌ ಮೇಲಿನ ಗಾಯ ಕೊಲೆ ಶಂಕೆ ಮೂಡಿಸಿತ್ತು‌‌ಅಮೀನಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು‌.

ಪತ್ನಿ‌ ಮೇಲೆ ಸಂಶಯದಿಂದ, ಪೋನ್ ಕಾಲ್ ಚೆಕ್ ಮಾಡಿದಾಗ, ರಾತ್ರಿ ಇಡೀ ಪತ್ನಿಯಿಂದ ಹಲವು ಭಾರಿ‌ ಪೋನು ಕರೆಗಳು ಬಂದಿದೆ. ಪ್ರೀತಿಸಿ ಮದುವೆ ಹಲವು ವರ್ಷಗಳ ಗತಿಸಿದೆ.ಇಬ್ಬರು ಮಕ್ಕಳು ಸಹ ಇದ್ದಾರೆ. ಖಾಸಗಿ ಶಾಲೆಯೊ‌ಂದರಲ್ಲಿ ಕೆಲಸ ಮಾಡುತ್ತಿದ್ದ ಸಮಯದಲ್ಲಿ, ಗ್ಯಾರೇಜ್ ಇಟ್ಟಕೊಂಡಿದ್ದ ರಾಘವೇಂದ್ರ ಎಂಬುವವ ಪರಿಚಯವಾಗಿ, ಪ್ರೀತಿಗೆ ತಿರುಗಿದೆ. ಈ ವಿಷಯ ಗಂಡನಿಗೆ ತಿಳಿದ ಪ್ರತಿ ನಿತ್ಯ ಕಿರಿಕಿರಿ ಪ್ರಾರಂಭ ವಾಗಿದೆ. ಇದನ್ನು ಪತ್ನಿ ತನ್ನ ಲವರ್ ತಿಳಿಸಿ,ಕೊಲೆ ಮಾಡುವ ಸಂಚು ರೂಪಿಸಿದ್ದಾರೆ. ತನ್ನ ಮಗಳನ್ನು ಕರೆದುಕೊಂಡು ಮುದಗಲ್ಲದಿಂದ ಬರುತ್ತಿದ್ದ ಗಂಡನ ಬಗ್ಗೆ ಮಾಹಿತಿ ಪಡೆಯುತ್ತಾ, ಇದ್ದಾರೆ. ಹುನಗುಂದದಲ್ಲಿ ತನ್ನ ಮಗಳಿಗೆ ಗಂಡ ಅವರ ತಾಯಿ ಹತ್ತಿರ ಬಿಟ್ಟು, ಮಧ್ಯ ಸೇವನೆ ಮಾಡಿ, ಕಮತಗಿಗೆ ಹೋಗುವ ಸಮಯದಲ್ಲಿ ಪ್ಲಾನ್ ಮಾಡಿ,ಕಾರು ಹಾಯಿಸಿ,ಅಪಘಾತ ಮಾಡುವ ಮೂಲಕ ಕೊಲೆ ಮಾಡಲು ಸಂಚು ರೂಪಿಸಿದ್ದಾರೆ. ಪ್ರೀತಿಸಿ ಮದುವೆ ಆದ ಬಳಿಕ ಅನೈತಿಕ ಸಂಭಂದದಿಂದ ಇಬ್ಬರಲ್ಲಿಯೂ ವೈಮನಸ್ಸು ಉಂಟಾಗಿ,ಗಂಡನನ್ನು ಬಿಟ್ಟು ತವರು ಮನೆಗೆ ತೆರಳಿ ಪತ್ನಿಯು ಇಂತಹ ಪ್ಲಾನ್ ಮಾಡಿ,ಲವರ್ ಗಾಗಿ ತನ್ನ ಗಂಡನನ್ನೆ ಕೊಲೆ ಮಾಡಿದ್ದಾರೆ.ವಿಚಾರಣೆ ವೇಳೆ ಪತ್ನಿ ಬಣ್ಣ ಬಯಲಾಗಿದೆ.

Share News

About BigTv News

Check Also

ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್‌ ದೂರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …

Leave a Reply

Your email address will not be published. Required fields are marked *