ಗದಗ: ಕೌಟುಂಬಿಕ ಸಮಸ್ಯೆ ಹಿನ್ನೆಲೆ ವಿಡಿಯೋ ಮಾಡಿ ಯುವಕನೊಬ್ಬ ತುಂಗಭದ್ರಾ ನದಿಗೆ ಹಾರಿದ ಘಟನೆ ನಡೆದಿದೆ. ಕೊರ್ಲಹಳ್ಳಿ ಮತ್ತು ಮದಲಗಟ್ಟಿ ಮಧ್ಯದ ಸೇತುವೆಯಿಂದ ಯುವಕ ನದಿಗೆ ಹಾರಿದ್ದಾನೆ ಎನ್ನಲಾಗಿದೆ. ಮುಂಡರಗಿ ತಾಲೂಕಿನ ತುಂಗಭದ್ರ ನದಿಗೆ ಅಡ್ಡಲಾಗಿ ಕಟ್ಟಲಾದ ಸೇತುವೆಗೆ ಜಿಗಿದು ನಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಿಡಿಯೋ ಮಾಡಿ ತುಂಬಿ ಹರಿಯುತ್ತಿರುವ ನದಿಗೆ ಯುವಕ ಹಾರಿದ್ದಾನೆ ಎನ್ನಲಾಗುತ್ತಿದೆ.
ವಿಡಿಯೋದಲ್ಲಿ ಟೂರ್ನಮೆಂಟ್ ನಲ್ಲಿ ಆಡಿ ಜವಾಬ್ದಾರಿ ಸಿಕ್ಕಿಲ್ಲ ಅಂತಾ ಹೇಳಿರೋ ಯುವಕ ಹೇಳಿದ್ದಾನೆ. ಮುಂಡರಗಿ ಪಟ್ಡಣದ ವಿಶ್ವ ಗಣಾಚಾರಿ ನದಿಗೆ ಹಾರಿದ ಯುವಕನಾಗಿದ್ದು, ಸ್ಥಳೀಯರು ನದಿಯಲ್ಲಿ ಯುವಕ ಮುಳುಗುತ್ತಿರುವ ವಿಡಿಯೋ ಮಾಡಿದ್ದಾರೆ.ಯುವಕನಿಗಾಗಿ ಸ್ಥಳೀಯ ಮೀನುಗಾರರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ನಡೆಸಿದ್ದಾರೆ.ನದಿ ರಭಸವಾಗಿ ಹರಿಯುತ್ತಿರುವುದರಿಂದ ಶೋಧ ಕಾರ್ಯಕ್ಕೆ ಅಡೆತಡೆಯಾಗಿದ್ದು,
ಮುಂಡರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





