ನವದೆಹಲಿ : ದ್ರೌಪದಿ ಮುರ್ಮು ಅವರು ರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸುವ ವೇಳೆ ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮಾಡಲಾಗಿದ್ದ ಆಸನ ವ್ಯವಸ್ಥೆ ಬಗ್ಗೆ ವಿವಾದ ಸೃಷ್ಟಿಯಾಗಿದೆ.
ಸ್ಥಾನಮಾನಕ್ಕೆ ಅನುಗುಣವಾದ ಆಸನ ವ್ಯವಸ್ಥೆಯನ್ನು ಅವರಿಗೆ ಮಾಡಿರಲಿಲ್ಲ. ಅವಮಾನ ಮಾಡುವ ಉದ್ದೇಶದಿಂದಲೇ ಹೀಗೆ ಮಾಡಲಾಗಿತ್ತು’ ಎಂದು ರಾಜ್ಯಸಭೆ ಸಭಾಪತಿಗೆ ಕಾಂಗ್ರೆಸ್, ಟಿಎಂಸಿ ಹಾಗೂ ಇತರ ವಿಪಕ್ಷಗಳು ಜಂಟಿ ದೂರು ನೀಡಿದೆ. ದ್ರೌಪದಿ ಅವರು ಪ್ರಮಾಣವಚನ ಸ್ವೀಕರಿಸುವ ವೇಳೆ ಖರ್ಗೆ ಮೊದಲ ಸಾಲಿನಲ್ಲೇ ಆಸೀನರಾಗಿದ್ದರು.
ಅವರ ಬಳಿ ಕೇಂದ್ರ ಸಚಿವ ಸರ್ಬಾನಂದ ಸೋನೊವಾಲ್ ಕೂತಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಖರ್ಗೆ ಅವರಿಗಿಂತ ತುಂಬಾ ದೂರದಲ್ಲಿ ಆಸನ ವ್ಯವಸ್ಥೆ ಮಾಡಲಾಗಿತ್ತು. ಈ ಬಗ್ಗೆ ಆಕ್ಷೇಪಿಸಿ ರಾಜ್ಯಸಭೆ ಸಭಾಪತಿಗೆ ಪತ್ರ ಬರೆದಿರುವ ವಿಪಕ್ಷಗಳ ಸಂಸದರು, ‘ಸ್ಥಾನಮಾನಕ್ಕೆ ತಕ್ಕುದಾದ ಆಸನವನ್ನು ಖರ್ಗೆ ಅವರಿಗೆ ನೀಡಿರಲಿಲ್ಲ. ಇದರಿಂದ ನಮಗೆ ಆಘಾತವಾಗಿದೆ. ಇದು ಶಿಷ್ಟಾಚಾರಕ್ಕೆ ವಿರುದ್ಧವಾದ್ದು ಹಾಗೂ ಬೇಕೆಂದೇ ಅವಮಾನ ಮಾಡಲು ಮಾಡಿರುವಂಥದ್ದು. ಹೀಗಾಗಿ ಈ ಪತ್ರ ಬರೆಯುತ್ತಿದ್ದೇವೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





