ದಾವಣಗೆರೆ: ನಗರದಲ್ಲಿ ಅಭಿಮಾನಿಗಳು ಆಯೋಜಿಸಿರುವ ತಮ್ಮ ಎಪ್ಪತೈದನೇ ವರ್ಷದ ಹುಟ್ಟುಹಬ್ಬದ ಆಚರಣೆಗಾಗಿ ಸಿದ್ದರಾಮಯ್ಯನವರು ಪುತ್ರ ಡಾ. ಯತೀಂದ್ರ ಅವರೊಂದಿಗೆ ವೇದಿಕೆಗೆ ಆಗಮಿಸಿದ್ದು, ಈ ಸಂದರ್ಭದಲ್ಲಿ ಅಭಿಮಾನಿಗಳ ಜಯ ಘೋಷ ಮುಗಿಲು ಮುಟ್ಟಿದೆ.
ಇದಕ್ಕೂ ಮುನ್ನ ದಾವಣಗೆರೆ ನಗರ ದೇವತೆ ದುರ್ಗಾಂಬಾ ದೇವಿಯ ದೇಗುಲಕ್ಕೆ ಭೇಟಿ ನೀಡಿದ್ದ ಅವರು ದೇವಿಯ ಆಶೀರ್ವಾದ ಪಡೆದಿದ್ದು, ಬಳಿಕ ದರ್ಗಾಕ್ಕೂ ತೆರಳಿದ್ದರು.
ಇದಾದ ಬಳಿಕ ನೇರವಾಗಿ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಆಗಮಿಸಿದ್ದಾರೆ.
ಸಿದ್ದರಾಮಯ್ಯ ಆಗಮಿಸುತ್ತಿದ್ದಂತೆಯೇ ಅಭಿಮಾನಿಗಳ ಉತ್ಸಾಹ ಮೇರೆ ಮೀರಿದೆ. ಕೆಲವರು ಕರಿ ಕಂಬಳಿಗಳನ್ನು ಬೀಸುತ್ತಾ ಸಿದ್ದರಾಮಯ್ಯನವರಿಗೆ ಸ್ವಾಗತ ಕೋರಿದ್ದಾರೆ. ಈಗ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ನೇತೃತ್ವದ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ಆರಂಭವಾಗಲಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





