ಹುಬ್ಬಳ್ಳಿ : ಸ್ವಯಂ ಪ್ರತಿಷ್ಠಾನ ಶಿರಗುಪ್ಪಿ ಇವರ ಸಹಯೋಗದಲ್ಲಿ ಹುಬ್ಬಳ್ಳಿ ತಾಲೂಕಿನ ಶಿರಗುಪ್ಪಿ ಗ್ರಾಮದ ಪಂಡಿತ ನೆಹರು ಪ್ರೌಢ ಶಾಲೆಯಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಗುರುವಾರ ಜರುಗಿತು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಮಣಕವಾಡದ ಶ್ರೀ ಅನ್ನದಾನೇಶ್ವರ ಮಠದ ಅಭಿನವ ಶ್ರೀ ಮೃತ್ಯುಂಜಯ ಮಹಾಸ್ವಾಮಿಗಳು, ಭಂಡಿವಾಡ ಹಾಗೂ ಅಣ್ಣಿಗೇರಿ ಗಿರೀಶ ಆಶ್ರಮದ ಡಾ. ಎ.ಸಿ.ವಾಲಿ ಮಹಾರಾಜರು, ಅಧ್ಯಕ್ಷತೆಯನ್ನು ಶಿರಗುಪ್ಪಿಯ ಶ್ರೀ ಗುರುಪಾದೇಶ್ವರ ಶಿಕ್ಷಣ ಸಮಿತಿಯ ಅಧ್ಯಕ್ಷರಾದ ಎನ್.ಎನ್.ಕಂಪ್ಲಿ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಗ್ರಾಮದ ಹಿರಿಯರಾದ ಶ್ರೀ ಶಿವಪುತ್ರಯ್ಯನವರು ಹೊಸಮಠ, ಮಲ್ಲಪ್ಪನವರು ಅಣ್ಣಿಗೇರಿ, ವ್ಹಿ.ಆರ್. ಹನುಮರಡ್ಡಿ, ಎಸ್.ಜಿ.ಮೆಣಸಿನಕಾಯಿ, ಮಹಾಬಳೇಶ್ವರ ಅಣ್ಣಿಗೇರಿ, ಪಿ.ಜಿ.ಹನುಮರಡ್ಡಿ, ಶಿವಣ್ಣ ಹುಬ್ಬಳ್ಳಿ, ರಾಚಯ್ಯನವರು ಹೊಸಮಠ, ಚೈತ್ರಾ ಶಿರೂರ,ಎಸ್.ಆರ್.ಹಳ್ಳೂರ, ಯಲ್ಲಮ್ಮ ಹಲಗಿ, ಪ್ರೌಢ ಶಾಲೆಯ ಎಸ್.ಆರ್.ಕಲಾದಗಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





