Breaking News

ಹಬ್ಬದ ದಿನವೇ ಹುಬ್ಬಳ್ಳಿಯಲ್ಲಿ ಹರಿದ ನೆತ್ತರ

ಹುಬ್ಬಳ್ಳಿ: ಮಹಾನವಮಿ ಹಬ್ಬದ ದಿನವೇ
ಯುವಕನ ಮೇಲೆ ಆತನ ಸ್ನೇಹಿತರೇ ಚಾಕುವಿನಿಂದ ಸಿಕ್ಕ ಸಿಕ್ಕಲ್ಲಿ ಇರಿದು ಕೊಲೆಗೈದ ಘಟನೆ ಹುಬ್ಬಳ್ಳಿಯ ಗೋಪನಕೊಪ್ಪದಲ್ಲಿ ನಡೆದಿದೆ.ಕೊಲೆಯಾದ ಯುವಕನನ್ನು ಗೋಪನಕೊಪ್ಪದ 22 ವರ್ಷದ ಶಿವರಾಜ ಅಂತ ಗುರುತಿಸಲಾಗಿದೆ.

ಗೋಪನಕೊಪ್ಪದ ಕರಿಯಮ್ಮ ದೇವಸ್ಥಾನದ ಜಾತ್ರಾ ಮಹೋತ್ಸವದ ವೇಳೆಯಲ್ಲಿ ಕ್ಷುಲ್ಲಕ ವಿಚಾರಕ್ಕೆ ಶಿವರಾಜ ಹಾಗೂ ಸಂದೀಪ್ ಎಂಬ ಯುವಕರ ಜೊತೆಗೆ ಜಗಳ ಮಾಡಿಕೊಂಡಿದ್ದ. ಈ ಜಗಳವು ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿತ್ತು. ಆಗ ಅಲ್ಲೇ ಇದ್ದ ಕೆಲವರು ಇಬ್ಬರನ್ನು ತಡೆದು ಬುದ್ದಿ ಹೇಳಿ ಕಳುಹಿಸಿದ್ದರು. ಆದ್ರೆ ಇಂದು ರಾತ್ರಿ ಏಕಾಏಕಿ ಆತನ ಮೇಲೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ ಅಂತಾನೇ ಕೊಲೆಯಾದ ಶಿವರಾಜನ ಗೆಳೆಯ ಕೀರ್ತಿರಾಜ.

ಶುಕ್ರವಾರ ಶಿವರಾಜ ಮನೆಯಲ್ಲಿ ಹಬ್ಬದ ನಿಮಿತ್ತ ಕುರಿಯನ್ನು ಕಡಿದು ಅಡುಗೆ ಮಾಡಲಾಗಿತ್ತು. ಶುಕ್ರವಾರ ಮಧ್ಯಾಹ್ನದವರೆಗೂ ತನ್ನ ಸ್ನೇಹಿತರ ಜೊತೆ ಸೇರಿ ದೇವರಿಗೆ ನೈವಿದ್ಯ ಅರ್ಪಣೆ ಮಾಡಿ ತನ್ನ ಗೆಳೆಯರಿಗೆ ಊಟವನ್ನು ಮಾಡಿಸಿ ಕಳುಹಿಸಿದ್ದಾನೆ. ರಾತ್ರಿ 10 ಗಂಟೆಗೆ ಊಟವನ್ನು ಮಾಡಿ ಇಲ್ಲೇ ಹೊರಗಡೆ ಹೋಗಿ ಬರ್ತೀನಿ ಅಂತ ಹೇಳಿದ್ದವ ಮನೆ ಬಿಟ್ಟು ಹೋದ ಕೆಲವೇ ಕೆಲವು ನಿಮಿಷಗಳಲ್ಲಿ ಚಾಕು ಇರಿತದಿಂದ ಭೀಕರವಾಗಿ ಕೊಲೆ ಮಾಡಿದ್ದಾರೆ ಅಂತಾಳೆ ಶಿವರಾಜನ ಅಕ್ಕ.

ಹಳೇ ದ್ವೇಷದ ಹಿನ್ನೆಲೆಯಲ್ಲಿ ಈ ಕೃತ್ಯ ಮಾಡಿದ್ದಾರೆ ಅಂತ ಶಿವರಾಜನ ಸ್ನೇಹಿತರು ಹೇಳುತ್ತಿದ್ದಾರೆ. ನಿನ್ನೆ ಜಗಳ ತೆಗೆದ ಸಂದೀಪ್ ಎಂಬಾತ, ‘ನಿನ್ನ ನಾಳೆ ನೋಡ್ಕೊತೀನಿ..’ ಅಂತಾ ಶಿವರಾಜಗೆ ಧಮ್ಮಿ ಹಾಕಿದ್ದ. ಆತನೇ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ ಅಂತ ಆರೋಪ ಮಾಡ್ತಿದ್ದಾರೆ. ಘಟನೆಯ ಮಾಹಿತಿ ತಿಳಿಯುತ್ತಿದ್ದ ಹಾಗೆ ಕಿಮ್ಸ್‌ ಶವಾಗಾರಕ್ಕೆ ಕಮಿಷನ‌ರ್ ಎನ್ ಶಶಿಕುಮಾರ್ ಭೇಟಿ ನೀಡಿದ್ದಾರೆ. ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

Share News

About Shaikh BigTv

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *