ಲಂಡನ್ : ಬ್ರಿಟನ್ ಪ್ರಧಾನಿ ಅಭ್ಯರ್ಥಿ ರಿಷಿ ಸುನಾಕ್ ಈಗ ಮತ್ತೊಂದು ವಿವಾದದಲ್ಲಿ ಸಿಲುಕಿದ್ದಾರೆ. ಇಂಗ್ಲೆಂಡಿನ ಹಲವೆಡೆ ಕ್ಷಾಮದ ಪರಿಸ್ಥಿತಿ ಇರುವಾಗ ತಮ್ಮ ಮನೆಯಲ್ಲಿ 3.8 ಕೋಟಿ ರೂಪಾಯಿ ವೆಚ್ಚದ ಈಜುಕೊಳ ನಿರ್ಮಿಸಿದ್ದಾರೆ ಎಂಬ ವರದಿಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ನಾರ್ಥ್ ಯಾರ್ಕ್‌ಶೈರ್‌ನಲ್ಲಿನ ತನ್ನ ಬಂಗಲೆಯಲ್ಲಿ ಸುನಾಕ್ 3.8 ಕೋಟಿ ರೂ. ವೆಚ್ಚದಲ್ಲಿ ಈಜುಕೊಳ ನಿರ್ಮಿಸಿದ್ದು ಅವರು ಪತ್ನಿ, ಇಬ್ಬರು ಮಕ್ಕಳೊಂದಿಗೆ ಇಲ್ಲಿ ವಾರಾಂತ್ಯ ಹಾಗೂ ರಜೆಯನ್ನು ಮೋಜಿನಿಂದ ಕಳೆಯುತ್ತಿದ್ದಾರೆ ಎಂದು ‘ಡೈಲಿ ಮೈಲ್’ ವ ರದಿ ಮಾಡಿದೆ. ಅಲ್ಲದೆ ಈ ಬಂಗಲೆಯಲ್ಲಿ ಟೆನಿಸ್ ಕೋರ್ಟ್ ಹಾಗೂ ಜಿಮ್ ಅನ್ನೂ ನಿರ್ಮಿಸಲಾಗುತ್ತಿದೆ. ಆಗಸದಿಂದ ತೆಗೆಯಲಾಗಿರುವ ಈ ಪ್ರದೇಶದ ಚಿತ್ರದಲ್ಲಿ ಈಜುಕೊಳ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿರುವುದು ದೃಢಪಟ್ಟಿದೆ ಎಂದು ವರದಿ ಹೇಳಿದೆ.ಕ್ಷಾಮದ ಹಿನ್ನೆಲೆಯಲ್ಲಿ ನೀರಿನ ಖರ್ಚು ಮಿತಗೊಳಿಸಲು ನಗರದಲ್ಲಿನ ಸಾರ್ವಜನಿಕ ಈಜುಕೊಳವನ್ನು ಮುಚ್ಚಿರುವ ಸಂದರ್ಭದಲ್ಲಿ ಜನಪ್ರತಿನಿಧಿಯೊಬ್ಬರು ಈ ರೀತಿ ಮಾಡುತ್ತಿರುವುದು ಸರಿಯೇ ಎಂದು ವ್ಯಾಪಕ ಖಂಡನೆ, ಟೀಕೆ ವ್ಯಕ್ತವಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

