ಬೆಂಗಳೂರು: ರಾಜ್ಯದಲ್ಲಿ ಮಂಗಳವಾರ 845 ಮಂದಿಗೆ ಸೋಂಕು ದೃಢಪಟ್ಟಿದ್ದು, ಅನಾರೋಗ್ಯದಿಂದ ಬಳಲುತ್ತಿದ್ದ 5 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ.
ಬೆಂಗಳೂರು ನಗರ 589, ಮೈಸೂರು 44, ಶಿವಮೊಗ್ಗ 34, ಕೊಡಗು 19, ಚಾಮರಾಜನಗರ 17, ಬಳ್ಳಾರಿ, ಹಾಸನ 14,ದಕ್ಷಿಣ ಕನ್ನಡ 13, ಧಾರವಾಡ 12, ಉತ್ತರ ಕನ್ನಡ,ಬೆಂಗಳೂರು ಗ್ರಾಮಾಂತರ 10, ರಾಮನಗರ 9, ಬೆಳಗಾವಿ 8, ತುಮಕೂರು 7, ಕೋಲಾರ, ದಾವಣಗೆರೆ, ಉಡುಪಿ 6, ಮಂಡ್ಯ, ರಾಯಚೂರು 5, ಚಿಕ್ಕಮಗಳೂರು, ಬಾಗಲಕೋಟೆ , 4,ಹಾವೇರಿ, ಕಲಬುರಗಿ, ವಿಜಯಪುರ 2, ಚಿಕ್ಕಬಳ್ಳಾಪುರ, ಚಿತ್ರದುರ್ಗ,ಕೊಪ್ಪಳ ಜಿಲ್ಲೆಯಲ್ಲಿ ತಲಾ ಒಂದು ಪಾಸಿಟಿವ್ ವರದಿಯಾಗಿದೆ.
ರಾಮನಗರ, ಬಳ್ಳಾರಿ, ಮೈಸೂರು, ಉಡುಪಿ, ಶಿವಮೊಗ್ಗ ಜಿಲ್ಲೆಯಲ್ಲಿ ತಲಾ ಒಂದು ಮರಣ ಪ್ರಕರಣ ದಾಖಲಾಗಿದ್ದಾರೆ. ಅವರಲ್ಲಿ ಇಬ್ಬರು ಸಾರಿ ಹಾಗೂ ಮೂವರು ಐಎಲ್‌ಐ ಸಮಸ್ಯೆಯಿಂದ ಬಳಲುತ್ತಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

