ಧಾರವಾಡ : ಕನ್ನಡ ಭಾಷೆಯ ಅಭಿವೃದ್ಧಿ ಕುರಿತು ಸಿದ್ಧಪಡಿಸಲಾದ ಕನ್ನಡ ಭಾಷಾ ಅಭಿವೃದ್ಧಿ ವಿಧೇಯಕ -2022 ನ್ನು ಜಾರಿಗೆ ತರಲು ಒತ್ತಾಯಿಸಿ ಧಾರವಾಡ ಗ್ರಾಮೀಣ ಶಾಸಕರಾದ ಅಮೃತ ದೇಸಾಯಿ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಮನವಿ ಸಲ್ಲಿಸಲಾಯಿತು .
ಅಧಿವೇಶನದಲ್ಲಿ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕವನ್ನು ಜಾರಿಗೆ ತರಲು ಒಮ್ಮತದಿಂದ ಅನುಮೋದಿಸಬೇಕೆಂದು ತಾಲೂಕಾ ಅಧ್ಯಕ್ಷರಾದ ಶರಣಮ್ಮ ಗೊರೇಬಾಳ , ಗೌರವ ಕಾರ್ಯದರ್ಶಿಗಳಾದ ಮಾರ್ತಾಂಡಪ್ಪ ಕತ್ತಿ , ಮಹಾಂತೇಶ ನರೆಗಲ್ಲ ಅವರ ನೇತೃತ್ವದಲ್ಲಿ ಕಸಾಪ ನಿಯೋಗ ಮನವಿ ಸಲ್ಲಿಸಿದೆ .
ನ್ಯಾಯಮೂರ್ತಿ ಎಸ್ . ಆರ್ . ಬನ್ನೂರಮಠ ಅವರ ನೇತೃತ್ವದ ಕರ್ನಾಟಕ ಕಾನೂನು ಆಯೋಗವು ” ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ 2022 ” ಕರಡನ್ನು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಇಲಾಖೆಯ ಸಚಿವರಾದ ಜೆ.ಸಿ. ಮಾಧುಸ್ವಾಮಿ ಹಾಗೂ ಸರ್ಕಾರಕ್ಕೆ 14-07-2022 ರಂದು ಸಲ್ಲಿಸಲಾಗಿತ್ತು
ಈ ವಿಧೇಯಕದಲ್ಲಿ ಅಧಿಕೃತ ಭಾಷೆಯ ಅನುಷ್ಠಾನಕ್ಕಾಗಿ ಕಾರ್ಯವ್ಯವಸ್ಥೆಯನ್ನು ರೂಪಿಸಲಾಗಿದೆ . ಇದಕ್ಕೋಸ್ಕರವಾಗಿ ರಾಜ್ಯಮಟ್ಟದ ಸಮಿತಿ , ಜಿಲ್ಲಾ ಮಟ್ಟದ ಸಮಿತಿ ಹಾಗೂ ತಾಲ್ಲೂಕು ಮಟ್ಟದ ಸಮಿತಿಗಳನ್ನು ರಚಿಸಲಾಗಿದೆ , ರಾಜ್ಯಮಟ್ಟದ ಸಮಿತಿಯಲ್ಲಿ ಅಧ್ಯಕ್ಷರು ,
ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಜಿಲ್ಲಾ ಮಟ್ಟದ ಸಮಿತಿಯಲ್ಲಿ ಅಧ್ಯಕ್ಷರು , ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು . ಇವರು ಸದಸ್ಯರಾಗಿರುತ್ತಾರೆ . ಕೂಡಲೇ ಈ ವಿಧೇಯಕವನ್ನು ಜಾರಿಗೆ ತರಲು ಶಾಸಕರು ಅಧಿವೇಶನದಲ್ಲಿ ಧ್ವನಿ ಎತ್ತಬೇಕು ಎಂದು ಒತ್ತಾಯಿಸಲಾಯಿತು
bigtvnews | Hubli Dharwad News | Kannada News | Karnataka News Hubli News | News In Hubli | Local news

