Breaking News

ಅಮೆರಿಕದಲ್ಲಿ ಗುಂಡಿನ ದಾಳಿ : ಐವರು ಸಾವು


ಟೆಕ್ಸಾಸ್​, ಅಮೆರಿಕ: ಸೆಂಟ್ರಲ್ ಟೆಕ್ಸಾಸ್​ನ ಹೊರವಲಯದಲ್ಲಿ ಗುಂಡಿನ ದಾಳಿ ನಡೆದಿದೆ. ಬಂದೂಕುದಾರಿಯೊಬ್ಬ ಗುಂಡಿನ ದಾಳಿ ನಡೆಸಿದ್ದು, ಘಟನೆಯಲ್ಲಿ ಐವರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಗುರುವಾರ ವ್ಯಾಕೊದಿಂದ 32 ಕಿ.ಮೀ ದೂರದಲ್ಲಿರುವ ಮೆಕ್ಗ್ರೆಗರ್​ನ​ಲ್ಲಿ ಐವರು ಶವವಾಗಿ ಪತ್ತೆಯಾಗಿದ್ದಾರೆ. ಅಲ್ಲಿ ನಡೆದ ಘಟನೆ ಬಗ್ಗೆ ವಿವರ ಕಲೆಹಾಕಲಾಗುತ್ತಿದೆ. ಸಾವಿನ ಕಾರಣ ಇನ್ನೂ ಪತ್ತೆ ಹಚ್ಚಬೇಕಾಗಿದೆ. ಈ ಬಗ್ಗೆ ಶಂಕಿತನನ್ನು ಬಂಧಿಸಲಾಗಿದೆ. ಸಾರ್ವಜನಿಕರು ಈ ಘಟನೆಯಿಂದ ಭಯಪಡಬೇಕಾಗಿಲ್ಲ. ಮೃತರ ಗುರುತು ಹಚ್ಚಲಾಗುತ್ತಿದೆ ಎಂದು ಸಾರ್ವಜನಿಕ ಸುರಕ್ಷತೆಯ ಟೆಕ್ಸಾಸ್ ಇಲಾಖೆಯ ವಕ್ತಾರ ರಿಯಾನ್​ ಹೂವಾರ್ಡ್​ ತಿಳಿಸಿದ್ದಾರೆ.

ಪತ್ತೆಯಾಗಿರುವ ಶವಗಳ ಮೇಲೆ ಗುಂಡು ತಗುಲಿರುವ ಗಾಯಗಳಾಗಿರುವ ಬಗ್ಗೆ ಮತ್ತು ಶಂಕಿತ ಮೇಲೆ ಗುಂಡು ಹಾರಿಸಿರುವ ಕುರಿತು ಮಾಹಿತಿ ನೀಡಲು ವಕ್ತಾರ ರಿಯಾನ್ ಹೊವಾರ್ಡ್ ನಿರಾಕರಿಸಿದರು. ಘಟನೆ ಬಳಿಕ ಸ್ಥಳೀಯ ಆಡಳಿತವು ಗುರುವಾರ ಸಂಜೆ ನಡೆಯಬೇಕಾಗಿದ್ದ ಅನೇಕ ಕಾರ್ಯಕ್ರಮ ಮತ್ತು ಕ್ರೀಡಾ ಚಟುವಟಿಕೆಗಳನ್ನು ರದ್ದುಗೊಳಿಸಿದೆ. ಮೃತರಿಗೆ ಜಿಲ್ಲಾಡಳಿತ ಸಂತಾಪ ಸೂಚಿಸಿದೆ.

Share News

About BigTv News

Check Also

ಅಡಿಕೆ ತೋಟಕ್ಕೆ ನೀರು ಹಾಯಿಸುವ ವಿಚಾರಕ್ಕೆ ಜಗಳ; ಚಿಕ್ಕಪ್ಪನಿಗೆ ಚಾಕು ಇರಿತ!

ಶಿವಮೊಗ್ಗ ತಾಲೂಕಿನ ಪುರದಾಳು ಗ್ರಾಮದಲ್ಲಿ ಜಮೀನಿನ ಗಡಿ ಹಾಗೂ ಅಡಿಕೆ ತೋಟಕ್ಕೆ ನೀರು ಹಾಯಿಸುವ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಯುವಕನೊಬ್ಬ …

Leave a Reply

Your email address will not be published. Required fields are marked *