ಹಾಸನ: ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ ಜೋಡೋ ಯಾತ್ರೆ ಆರನೇ ದಿನಕ್ಕೆ ಕಾಲಿಟ್ಟಿದೆ. ಆದರೆ ಈ ಯಾತ್ರೆಯಲ್ಲಿ ಪಕ್ಷದ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಸಹೋದರ ಸುರೇಶ್ ಗೆ ಸಾಧ್ಯವಾಗುತ್ತಿಲ್ಲ.
ಬೆಳಗ್ಗೆ ಏಳು ಗಂಟೆಯಿಂದ ನಾಗಮಂಗಲದ ಮಲ್ಲೇನಹಳ್ಳಿಯಿಂದ ಯಾತ್ರೆ ಆರಂಭವಾಗಲಿದೆ. ನಾಗಮಂಗಲ ತಾಲೂಕಿನ ಅಂಚೆ ಚಿತ್ತನಹಳ್ಳಿ ಬಳಿಯಿರುವ ಮೈದಾನದವರೆಗೂ ಸಾಗಿ ಹನ್ನೊಂದು ಗಂಟೆಗೆ ಲಂಚ್ ಬ್ರೇಕ್ ತೆಗೆದುಕೊಳ್ಳಲಿದ್ದಾರೆ. ಮತ್ತೆ ನಾಲ್ಕು ಗಂಟೆಗೆ ಯಾತ್ರೆ ಆರಂಭಗೊಳ್ಳಲಿದೆ ಬೆಳ್ಳೂರು ಬಸ್ ಸ್ಟಾಪ್ ವರೆಗೆ ಪಾದಯಾತ್ರೆ ನಡೆಯಲಿದೆ. ಸಂಜೆ ಏಳು ಗಂಟೆಗೆ ಕಾರ್ನರ್ ಮೀಟಿಂಗ್ ನೊಂದಿಗೆ ಆರನೇ ದಿನದ ಯಾತ್ರೆ ಮುಕ್ತಾಯಗೊಳ್ಳಲಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

