ಕನ್ನಡತಿ, ನಟಿ ದಿವ್ಯಾ ಶ್ರೀಧರ್ ಮೇಲೆ ಹಲ್ಲೆ ಮಾಡಿದ್ದ ಆರೋಪ ಹೊತ್ತಿರುವ ಆಕೆಯ ಪತಿಯನ್ನು ಚೆನ್ನೈ ಪೊಲೀಸರು ಕೊನೆಗೂ ಬಂಧಿಸಿದ್ದಾರೆ.ಪತಿ ಅರ್ನವ್ ಅಲಿಯಾಸ್ ಅಮ್ಜದ್ ಖಾನ್ ವಿರುದ್ಧ ಕನ್ನಡತಿ, ದಿವ್ಯಾ ಶ್ರೀಧರ್ ಚೆನ್ನೈ ಪೊಲೀಸರ ಬಳಿ ಹಲ್ಲೆ ಹಾಗೂ ವಂಚನೆ ದೂರು ದಾಖಲಿಸಿದ್ದರು.ಪ್ರಕರಣ ಸಂಬಂಧ ಸಮನ್ಸ್‌ಗಳನ್ನು ನೀಡಿದ್ದ ಚೆನ್ನೈ ಪೊಲೀಸರು ಅಂತಿಮವಾಗಿ ನಿನ್ನೆ ಅಮ್ಜದ್ ಖಾನ್ ಅನ್ನು ಬಂಧಿಸಿದ್ದಾರೆ.
ಒಂದು ವಾರದ ಹಿಂದೆ (ಅಕ್ಟೋಬರ್ 06) ರಂದು ನಟಿ ದಿವ್ಯಾ ಶ್ರೀಧರ್ ಪತಿಯಿಂದ ಹಲ್ಲೆಗೊಳಗಾಗಿ ಚೆನ್ನೈನ ಖಾಸಗಿ ಆಸ್ಪತ್ರೆಗೆ ಗಾಯಗೊಂಡ ಸ್ಥಿತಿಯಲ್ಲಿ ದಾಖಲಾಗಿದ್ದರು. ಗರ್ಭಿಣಿ ಆಗಿದ್ದ ದಿವ್ಯಾ ಶ್ರೀಧರ್ ಅಂದೇ ವಕೀಲರ ಸಹಾಯದ ಮೂಲಕ ಪತಿ ಅಮ್ಜದ್ ಖಾನ್ ವಿರುದ್ಧ ಚೆನ್ನೈ ಪೊಲೀಸರ ಬಳಿ ದೂರು ದಾಖಲಿಸಿದ್ದರು.
ದೂರು ಸ್ವೀಕರಿಸಿದ್ದ ಪೊಲೀಸರು ಅಮ್ಜದ್ ಖಾನ್‌ಗೆ ಸಮನ್ಸ್ ಜಾರಿ ಮಾಡಿದ್ದರು. ಆದರೆ ಪೊಲೀಸರ ವಿಚಾರಣೆಗೆ ಅಮ್ಜದ್ ಹಾಜರಾಗದ ಕಾರಣ ನಿನ್ನೆ ಅಮ್ಜದ್ ಅನ್ನು ಬಂಧಿಸಿ ಕರೆದೊಯ್ದಿದ್ದಾರೆ. ಅಕ್ಟೋಬರ್ 14 ರಂದು ತಮಿಳುನಾಡಿನ ಕೂಟಂಬಾಕಂನಲ್ಲಿ ಧಾರಾವಾಹಿಯೊಂದರ ಚಿತ್ರೀಕರಣದಲ್ಲಿ ಅಮ್ಜದ್ ಖಾನ್ ತೊಡಗಿಕೊಂಡಿದ್ದಾಗ ಅಲ್ಲಿಗೆ ತೆರಳಿದ ಪೊಲೀಸ್ ಸಿಬ್ಬಂದಿ ಸೆಟ್‌ನಲ್ಲಿಯೇ ಅಮ್ಜದ್ ಅನ್ನು ಬಂಧಿಸಿ ಕರೆದೊಯ್ದಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

