Breaking News
Featured Video Play Icon

15ರಂದು ಸರ್ದಾರ್ ಏಕತಾ ನಡಿಗೆ ಕಾರ್ಯಕ್ರಮ: ಮೇಯರ್ ಜ್ಯೋತಿ ಪಾಟೀಲ…

ಉಕ್ಕಿನ ಮನುಷ್ಯನ ಸ್ಮರಣೆಗೆ ಏಕತಾ ನಡಿಗೆ..!

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಹಾಗೂ ಮೇರಾ ಯುವ ಭಾರತ ನೇತೃತ್ವದಲ್ಲಿ ಯುವಕಾರ್ಯ ಮತ್ತು ಕ್ರೀಡಾ ಸಚಿವಾಲಯವು ಮೈ ಭಾರತ್ (MY Bharat) ಮೂಲಕ “ವಿಕಸಿತ ಭಾರತ್ ಪಾದಯಾತ್ರೆ” ಎಂಬ ರಾಷ್ಟ್ರೀಯ ಅಭಿಯಾನವನ್ನು ಇದೇ ನವೆಂಬರ್15ರಂದು ಹಮ್ಮಿಕೊಳ್ಳಲಾಗಿದೆ ಎಂದು ಮೇಯರ್ ಜ್ಯೋತಿ ಪಾಟೀಲ ಹೇಳಿದರು.ನಗರದಲ್ಲಿಂದು ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ಅವರು, ಈ ಅಭಿಯಾನದ ಉದ್ದೇಶ ರಾಷ್ಟ್ರಪ್ರೇಮವನ್ನು ಉತ್ತೇಜಿಸುವುದು. ನಾಗರಿಕ ಜವಾಬ್ದಾರಿಯ ಮನೋಭಾವವನ್ನು ಆಳವಾಗಿ ಬಿತ್ತುವುದು ಮತ್ತು ಯುವಕರಲ್ಲಿ ಏಕತೆಯ ಆತ್ಮವನ್ನು ಬಲಪಡಿಸುವುದಾಗಿದೆ ಎಂದರು. ನರೇಂದ್ರ ಮೋದಿಯವರ ಜನಭಾಗಿದಾರಿ ಮೂಲಕ ರಾಷ್ಟ್ರ ನಿರ್ಮಾಣದ ದೃಷ್ಟಿಕೋನವನ್ನು ಅನುಸರಿಸಿ. ಈ ಅಭಿಯಾನವು ಯುವಕರಿಂದ ಹಿಡಿದು ಹಿರಿಯರ ತನಕ ಎಲ್ಲರನ್ನೂ ಒಂದೇ ವೇದಿಕೆಯಲ್ಲಿ ಒಗ್ಗೂಡಿಸುತ್ತದೆ. ಇದು ಅಮೃತ ಪೀಳಿಗೆಯ ಯುವಕರ ಪಾತ್ರವನ್ನು ರಾಷ್ಟ್ರ ನಿರ್ಮಾಣದಲ್ಲಿ ಪುನರುಚ್ಚರಿಸುತ್ತದೆ ಹಾಗೂ ಭಾರತದ ರಾಷ್ಟ್ರ ನಾಯಕರ ಮಹತ್ವದ ಕೊಡುಗೆಯನ್ನು ಸ್ಮರಿಸುತ್ತದೆ ಎಂದು ಅವರು ಹೇಳಿದರು.ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರ ನೇತೃತ್ವದಲ್ಲಿ ನಡೆಯುವ ಈ ಸರ್ದಾರ್@150 ಏಕತಾ ನಡಿಗೆ ಕಾರ್ಯಕ್ರಮದಲ್ಲಿ ಸಚಿವ ಜೋಶಿಯವರು ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಪಾದಯಾತ್ರೆಯು ಹುಬ್ಬಳ್ಳಿಯ ಕೆ.ಎಲ್.ಇ. ಬಿವಿಬಿ ತಾಂತ್ರಿಕ ವಿಶ್ವವಿದ್ಯಾಲಯದಿಂದ ಬೆಳಿಗ್ಗೆ ಗಂಟೆಗೆ ಪ್ರಾರಂಭವಾಗಿ ತೋಳನಕೆರೆಗೆ ಮುಕ್ತಾಯವಾಗಲಿದೆ ಎಂದರು.

Share News

About Shaikh BigTv

Check Also

ಖಾಸಗಿ ಆಸ್ಪತ್ರೆ ವಿರುದ್ಧ ದೂರು ದಾಖಲು, ಪೋಷಕರಿಂದ ಆಕ್ರೋಶ

ಖಾಸಗಿ ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ 2 ವರ್ಷ 8 ತಿಂಗಳ ಮಗು ಮೃತಪಟ್ಟಿದ್ದು, ವೈದ್ಯರ ನಿರ್ಲಕ್ಷ್ಯವೇ ಸಾವಿಗೆ ಕಾರಣ …

Leave a Reply

Your email address will not be published. Required fields are marked *