Breaking News

ಬಾಗಲಕೋಟೆಯಿಂದ ಬೆಂಗಳೂರು ವರಗೆ “ಸ್ವಚ್ಛ ವಿಧಾನಸಭೆ” ಅಭಿಯಾನ ಪಾದಯಾತ್ರೆ

ಹುಬ್ಬಳ್ಳಿ: 2023 ರಲ್ಲಿ ನಡೆಯುವ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಬಾಗಲಕೋಟೆಯಿಂದ ಬೆಂಗಳೂರು ವರಗೆ ಎಂ.ಎಸ್ಸಿ,ಎಂ.ಟೆಕ್ ಪದವೀಧರ ಹಾಗೂ ಸಾಮಾಜಿಕ ಕಾರ್ಯಕರ್ತ ನಾಗರಾಜ ಕಲಕುಟಕರ್ ಆರಂಭಿಸಿರುವ “ಸ್ವಚ್ಛ ವಿಧಾನಸಭೆ” ಅಭಿಯಾನ ಪಾದಯಾತ್ರೆ ಸದ್ಯ ನಮ್ಮ ಹುಬ್ಬಳ್ಳಿಯಲ್ಲಿ‌ ಕಾಲಿಟ್ಟಿದೆ

ಬಾಗಲಕೋಟೆಯಿಂದ ಜೂನ್ 9ರಂದು ಆರಂಭಿಸಿರುವ ಈ ಅಭಿಯಾನ ಈಗಾಗಲೇ ಹಲವು ವಿಧಾನಸಭಾ ಕ್ಷೇತ್ರಗಳ ಮೂಲಕ ಸಾಗಿ ಇದೀಗ ಜಿಲ್ಲೆಯಲ್ಲಿ ಸಂಚರಿಸುತ್ತಿದ್ದು, ರಾಜ್ಯದ 31 ಜಿಲ್ಲೆಗಳ ಎಲ್ಲ 224 ಕ್ಷೇತ್ರಗಳಲ್ಲಿ ಸಂಚರಿಸಿ, ಮುಂದಿನ ಜನವರಿ 26ರಂದು ಬೆಂಗಳೂರು ತಲುಪಲಿದೆ.

ಈ ಕುರಿತು ಮಾತನಾಡಿದ ನಾಗರಾಜ

ಕಲಕುಟುಕರ, ಪಾದಯಾತ್ರೆ ಮೂಲಕ ರಾಜ್ಯದ ಲಕ್ಷಾಂತರ ಮತದಾರರನ್ನು ಭೇಟಿಯಾಗಿ ತಮ್ಮ ಅಮೂಲ್ಯ ಮತವನ್ನು ದಕ್ಷರು, ಕಳಂಕ ರಹಿತರು, ಭ್ರಷ್ಟಾಚಾರ ರಹಿತರು, ಜಾತ್ಯತೀತ, ಪ್ರಬುದ್ಧರಿಗೆ, ಜನಪರ ಚಿಂತನೆ ಉಳ್ಳವರಿಗೆ ಹಾಗೂ ಪ್ರಾಮಾಣಿಕರಿಗೆ ಮತ ಹಾಕುವ ಮೂಲಕ ಶಾಸಕರನ್ನಾಗಿ ಆರಿಸಿ ಕಳುಹಿಸಬೇಕು ಎಂದು ಮನವಿ ಮಾಡುತ್ತಿದ್ದೇನೆ ಎಂದರು

ರಾಜ್ಯದ ಶಕ್ತಿಕೇಂದ್ರವಾದ ವಿಧಾನಸೌಧವನ್ನು ಭ್ರಷ್ಟರು, ಮತಾಂದರು ಮತ್ತು ಲೂಟಿಕೋರರಿಂದ ಮುಕ್ತಗೊಳಿಸಬೇಕು. ಪ್ರಜಾಪ್ರಭುತ್ವ, ಸಂವಿಧಾನ ಉಳಿಸಬೇಕು ಎಂದು ಜಾಗೃತಿ ಮೂಡಿಸುತ್ತಿದ್ದೇನೆ ಎಂದರು.

ಹಣ, ಹೆಂಡ,ಸೀರೆ, ಪಂಚೆ, ನಿಕ್ಕರ್, ಕುಕ್ಕರ್ ಹಾಗೂ ಜಾತಿ-ಮತ-ಪಂಥ ಸೇರಿದಂತೆ ಮತ್ತಿತರರ ಆಮಿಷಗಳಿಗೆ ಮತವನ್ನು ಮಾರಿಕೊಳ್ಳಬಾರದು ಎಂದು ಮತದಾರರನ್ನು ಕೋರುತ್ತಿದ್ದೇನೆ. ಜನರಿಂದ ಉತ್ತಮ ಪ್ರತಿಕ್ರಿ ವ್ಯಕ್ತವಾಗುತ್ತಿದೆ. ಇದರಿಂದ ಒಂದಷ್ಟು ಜನರು ಬದಲಾವಣೆಯಾಗುತ್ತಾರೆ ಎಂಬ ವಿಶ್ವಾಸದಿಂದ ಹೆಜ್ಜೆ ಹಾಕುತ್ತಿದ್ದೇನೆ ಎಂದು ತಿಳಿಸಿದರು

Share News

About BigTv News

Check Also

ಆನ್‌ಲೈನ್ ಆಯಪ್‌ನಲ್ಲಿ ಸಾಲ ಪಡೆದ ಮಹಿಳೆಗೆ ಫೋಟೋ ಮಾರ್ಫಿಂಗ್ ಬೆದರಿಕೆ – ₹2.90 ಲಕ್ಷ ವಂಚನೆ!

ಮಂಗಳೂರು: ಆನ್‌ಲೈನ್ ಆಯಪ್ ಮೂಲಕ ಸಾಲ ಪಡೆದ ಮಹಿಳೆಯೊಬ್ಬರಿಗೆ ಫೋಟೋ ಮಾರ್ಫ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಸಿ ₹2.90 …

Leave a Reply

Your email address will not be published. Required fields are marked *