ಧಾರವಾಡ : ಅ.29ರಂದು ನಿಧನರಾದ ಚಂದನವನದ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ನೆನಪು ಅಭಿಮಾನಿಗಳಲ್ಲಿ ಸದಾ ಹಸಿರು. ಪುನೀತ್ ಸಾವಿನ ನೋವಿನಿಂದ ಇಡೀ ಕರ್ನಾಟಕದ ಜನತೆ ಇನ್ನೂ ಹೊರಬಂದಿಲ್ಲ. ಅವರ ಹೆಸರಿನಲ್ಲಿ ಹಲವು ಸಮಾಜ ಸೇವಾ ಕಾರ್ಯಗಳು ಮುಂದುವರೆದಿವೆ. ಇದರ ನಡುವೆ ಅಪ್ಪು ಅಭಿಮಾನಿ ಕುಟುಂಬದ ಧಾರವಾಡದ ಮನಗುಂಡಿಯ ದ್ರಾಕ್ಷಾಯಣಿ ಪಾಟೀಲ್ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ಸಮಾಧಿಗೆ ಭೇಟಿ ನೀಡಲು ಮತ್ತೆ ಪಾದಯಾತ್ರೆ ಆರಂಭಿಸಲಿದ್ದಾರೆ. ಧಾರವಾಡ ತಾಲೂಕಿನ ಮನಗುಂಡಿ ಗ್ರಾಮದಿಂದ ಮತ್ತೆ ಪಾದಯಾತ್ರೆ ಆರಂಭಿಸಲು ಧ್ರಾಕ್ಷಾಯಣಿ ಪಾಟೀಲ್ ನಿರ್ಧರಿಸಿದ್ದಾರೆ. ಬೆಂಗಳೂರಿನ ಕಂಠೀರವ ಸ್ಟುಡಿಯೋದ ಪುನೀತ್ ಸಮಾಧಿವರೆಗೂ ಮೂರು ಮಕ್ಕಳ ತಾಯಿಯಾಗಿರೋ ದ್ರಾಕ್ಷಾಯಿಣಿ ಪಾಟೀಲ್ ಪಾದಯಾತ್ರೆ ಕೈಗೊಳ್ಳಲಿದ್ದಾರೆ.
ಕಳೆದ ಒಂದು ವರ್ಷದ ಹಿಂದೆಯೂ ಪುನೀತ್ ಮೃತರಾದಾಗ ಸಮಾಧಿವರೆಗೆ ಪಾದಯಾತ್ರೆ ಮೂಲಕ ದ್ರಾಕ್ಷಾಯಿಣಿ ಅವರು ತೆರಳಿದ್ದರು. ಮೂಲತಃ ಅಥ್ಲೆಟಿಕ್ ಆಗಿರೋ ದ್ರಾಕ್ಷಾಯಿಣಿ, ಪುನೀತ್ ರಾಜಕುಮಾರ್ ಅಪ್ಪಟ ಅಭಿಮಾನಿಯಾಗಿದ್ದಾರೆ. ದಾಕ್ಷಾಯಣಿ ಹಾಗೂ ಅವರ ಕುಟುಂಬ ಪುನೀತ್ ರಾಜ್ ಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿದ್ದರು. ಅವರನ್ನು ಕಣ್ಣಾರೆ ನೋಡುವ ಬಯಕೆ ಹೊಂದಿದ್ದರು. ಆದರೆ ಅಪ್ಪು ಅಕಾಲಿಕ ಮರಣದಿಂದ ಅದು ಸಾಧ್ಯವಾಗಲಿಲ್ಲ. ಹೀಗಾಗಿ ಸಮಾಧಿ ಇರುವ ಜಾಗಕ್ಕೆ ಧಾರವಾಡದ ಮನಗುಂಡಿಯಿಂದ ಪಾದಯಾತ್ರೆ ಕೈಗೊಂಡಿದ್ದರು. ಮನಗುಂಡಿಯಿಂದ ಬೆಂಗಳೂರಿಗೆ 500 ಕಿಲೋಮೀಟರ್ ದಾಕ್ಷಾಯಣಿ ಪಾಟೀಲ್ ಪಾದಯಾತ್ರೆ ಮೂಲಕ ಅಪ್ಪು ಅವರ ಸಮಾಧಿ ತಲುಪಿದ್ದರು.
30 ವರ್ಷ ವಯಸ್ಸಿನ ದಾಕ್ಷಾಯಣಿ ಪಾಟೀಲ್ ಉತ್ತಮ ಓಟಗಾರ್ತಿ ಕೂಡ ಹೌದು. ಪತಿ ಉಮೇಶ್ ಅವರ ಸಹಕಾರ ಹಾಗೂ ಕುಟುಂಬದ ಬೆಂಬಲೊಂದಿಗೆ ದಿನಕ್ಕೆ 40 ಕಿಮೀ ಪ್ರಯಾಣಿಸುವ ಗುರಿಹೊತ್ತ ದಾಕ್ಷಾಯಿಣಿ ಬೆಂಗಳೂರಿಗೆ ಹೋಗಿದ್ದರು. ಹೀಗಾಗಿ ತಮ್ಮ ಅಭಿಮಾನವನ್ನು ಪಾದಯಾತ್ರೆ ಮೂಲಕ ತೋರಿಸಿ ಅಗಲಿದ ಅಪ್ಪುವಿಗೆ ಪ್ರೀತಿಯ ನಮನ ಸಲ್ಲಿಸಿದ್ದರು. ಜತೆಗೆ ಪುನೀತ್ ಅವರ ಮನೆಯವರನ್ನು ಭೇಟಿಯಾಗಿದ್ದರು.
ಅಲ್ಲದೇ ಅಭಿ’ ಸಿನಿಮಾ ನೋಡಿ ಅಭಿಮಾನ ಬೆಳೆಸಿಕೊಂಡಿದ್ದ ದಾಕ್ಷಾಯಿಣಿ, ಪಾದಯಾತ್ರೆಯಲ್ಲಿ ಬಂದು ನೇತ್ರದಾನವನ್ನೂ ಮಾಡಲಿದ್ದರು. ದಾಕ್ಷಾಯಿಣಿಯ ಈ ಅಭಿಮಾನದ ಹರಕೆಗೆ ಪತಿ-ಮಕ್ಕಳಿಂದಲೂ ಸಹಕಾರ ಸಿಕ್ತಿದೆ.
‘ಅಪ್ಪು‘ ಅಭಿಮಾನಿಯೊಬ್ಬರು ತಮ್ಮ ನೆಚ್ಚಿನ ನಟನಿಗೆ ವಿಭಿನ್ನವಾಗಿ ಶ್ರದ್ಧಾಂಜಲಿ ಅರ್ಪಿಸಲು ಮತ್ತೆ ಈಗ ಮುಂದಾಗಿದ್ದಾರೆ. ಪುನೀತ್ಗಾಗಿ ಬರೋಬ್ಬರಿ 500 ಕಿಲೋ ಮೀಟರ್ ಪಾದಯಾತ್ರೆ ಕೈಗೊಂಡಿದ್ದಾರೆ. ಧಾರವಾಡದ ಮನಗುಂಡಿಯಿಂದ ಕಂಠೀರವ ಸ್ಟುಡಿಯೋದ ಪುನೀತ್ ಸಮಾಧಿವರೆಗೂ ಪಾದಯಾತ್ರೆ ಕೈಗೊಂಡಿದ್ದಾರೆ.
ಅಪ್ಪು‘ ಅಗಲಿಕೆಯಿಂದ ಇಡೀ ಕರ್ನಾಟಕವೇ ಮಂಕಾದಂತಿದೆ. ಅಪ್ಪು ಅಗಲಿ ಒಂದು ವರ್ಷಗಳು ಕಳೆದರು ಆ ಕಹಿ ದಿನವನ್ನು ಅರಗಿಸಿಕೊಳ್ಳಲು ಕಷ್ಟವಾಗುತ್ತಿದೆ. ಪುನೀತ್ ಕರುನಾಡಿಗರ ಮನಸ್ಸಿನಲ್ಲಿ ಶಾಶ್ವತವವಾಗಿ ಉಳಿದುಬಿಟ್ಟಿದ್ದಾರೆ. ಕೆಲ ಅಭಿಮಾನಿಗಳು ದೂರದ ಊರಿನಿಂದ ಎತ್ತಿನ ಬಂಡಿ ಹತ್ತಿ ಬಂದಿದ್ದರು. ಇನ್ನು ಕೆಲ ಅಭಿಮಾನಿಗಳು ನೂರಾರು ಕಿಲೋ ಮೀಟರ್ ದೂರದಿಂದ ಬೈಕ್ ಹತ್ತಿ ಅಪ್ಪು ಸಮಾಧಿ ದರ್ಶನಕ್ಕೆ ಧಾವಿಸಿದ್ದಾರೆ. ಇಲ್ಲೊಬ್ಬ ಮಹಿಳಾ ಅಭಿಮಾನಿ 500ಕಿಲೋ ಮೀಟರ್ ದೂರದಿಂದ ಅಪ್ಪು ಸಮಾಧಿ ಬಳಿ ನಡೆದುಕೊಂಡು ಬರುತ್ತಿದ್ದಾರೆ.
ಮನಗುಂಡಿ ಗ್ರಾಮದ ದಾಕ್ಷಾಯಿಣಿ ಉಮೇಶ ಪಾಟೀಲ ಎಂಬುವವರು ಅಪ್ಪು ವರ್ಷದ ತಿಥಿಯ ದಿನವೇ ಪಾದಯಾತ್ರೆ ಮತ್ತೆ ಆರಂಭಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

