ಬೆಳಕಿನ ಹಬ್ಬ – ಆನ್ಲೈನ್ ಅಥವಾ ಸೂಪರ್ಮಾರ್ಕೆಟ್ ಬದಲಿಗೆ ದೊಡ್ಡ ಸಂಕಷ್ಟವನ್ನು ಅನುಭವಿಸುತ್ತಿರುವ ಸ್ಥಳೀಯ ಮಾರಾಟಗಾರರಿಂದ ಹಬ್ಬದ ವಸ್ತುಗಳ ಖರೀದಿಸಿ – ರಜತ್ ಉಳ್ಳಾಗಡ್ಡಿಮಠ ಫೌಂಡೇಶನ್ ಅಭಿಯಾನ ಆರಂಭಿಸಿದರು.
ಬೆಲೆ ಏರಿಕೆ, ನೋಟ್ ಬ್ಯಾನ್, ಜಿಎಸ್ ಟಿ , ಕೊರೊನಾ, ಲಾಕ್ ಡೌನ್ ದಿಂದ ಮಧ್ಯಮ ಮತ್ತು ಸಣ್ಣ ಉದ್ಯಮಗಳು ದೊಡ್ಡ ಸಂಕಷ್ಟವನ್ನು ಅನುಭವಿಸುತ್ತಿವೆ.
ಪನತಿ ಸೇರಿದಂತೆ ಇನ್ನಿತರ ವಸ್ತುಗಳನ್ನು ಸ್ಥಳೀಯವಾಗಿಯೇ ಖರೀದಿಸಿ ಎಂದಿದ್ದಾರೆ.
ಬೆಳಕಿನ ಹಬ್ಬ ದೀಪಾವಳಿಗೆ ಹುಬ್ಬಳ್ಳಿ ಸಜ್ಜಾಗುತ್ತಿದೆ. ಕೊರೊನಾ ಕಾರಣದಿಂದ ಕಳೆದ ಎರಡು-ಮೂರು ವರ್ಷಗಳಿಂದ ದೀಪಾವಳಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಈ ಬಾರಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ವಾಣಿಜ್ಯ ನಗರಿಯ ಮಂದಿ ಭರ್ಜರಿ ಪ್ಲಾನ್ ಮಾಡಿಕೊಂಡಿದ್ದಾರೆ. ದೀಪಾವಳಿಯ ಮೂರು ದಿನದ ಸಂಭ್ರಮಾಚರಣೆಗೆ ಜನ ನಗರದ ಮಾರುಕಟ್ಟೆಗಳಲ್ಲಿ ಭರ್ಜರಿ ಖರೀದಿ ಮಾಡುತ್ತಿದ್ದು, ಇದೇ ವೇಳೆಯಲ್ಲಿ ನಗರದಲ್ಲಿ “ಹೋಕಲ್ ಫಾರ್ ಲೋಕಲ್” ಅಭಿಯಾನ ಜೋರಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

