ಶಿವಮೊಗ್ಗ: ನಗರದಲ್ಲಿ ಅಭಿಮಾನಿಗಳಿಂದ ನಟ ಪುನೀತ್ ರಾಜಕುಮಾರ್ ಅವರ ಮೊದಲ ವರ್ಷದ ಪುಣ್ಯ ಸ್ಮರಣೆ ಮಾಡಲಾಯಿತು. ಮೂರು ಸಾವಿರ ಜನರಿಗೆ ಬಾಡೂಟ ಬಡಿಸಿ, ಯುವಕರು ತಮ್ಮ ನೆಚ್ಚಿನ ನಟನಿಗೆ ನಮನ ಸಲ್ಲಿಸಿದರು.
ವಿದ್ಯಾನಗರದ ಯಾಲಕಪ್ಪನಕೇರಿಯ ಶ್ರೀ ವೀರಕೇಸರಿ ಯುವಕರ ಸಂಘದ ವತಿಯಿಂದ ನಟ ಪುನೀತ್ ರಾಜಕುಮಾರ್ ಮೊದಲ ವರ್ಷದ ಪುಣ್ಯ ಸ್ಮರಣೆ ಮಾಡಲಾಯಿತು.
ಬಿ.ಹೆಚ್.ರಸ್ತೆ ಪಕ್ಕದಲ್ಲೇ ವಿದ್ಯಾನಗರದಲ್ಲಿ ವಿವಿಧ ಹೂವುಗಳಿಂದ ಅಲಂಕೃತ ಮಂಟಪ ನಿರ್ಮಿಸಲಾಗಿತ್ತು. ಅದರಲ್ಲಿ ನಟ ಪುನೀತ್ ರಾಜಕುಮಾರ್ ಅವರ ಭಾವಚಿತ್ರವನ್ನು ಇರಿಸಿದ್ದರು, ಪುನೀತ್ ರಾಜಕುಮಾರ್ ಅವರ ಭಾವಚಿತ್ರಕ್ಕೆ ಯುಕವರು ವಿಶೇಷ ಪೂಜೆ ಸಲ್ಲಿಸಿದರು. ಅಲ್ಲದೆ ತಮ್ಮ ನೆಚ್ಚಿನ ನಟನ ಸ್ಮರಣೆ ಮಾಡಿದರು.
3 ಸಾವಿರ ಜನರಿಗೆ ಬಾಡೂಟ : ಮೊದಲ ಪುಣ್ಯ ಸ್ಮರಣೆ ಅಂಗವಾಗಿ ಸುಮಾರು 3 ಸಾವಿರ ಜನರಿಗೆ ಬಾಡೂಟದ ವ್ಯವಸ್ಥೆ ಮಾಡಲಾಗಿತ್ತು. ನಾಲ್ಕು ಕುರಿ, 2 ಕ್ವಿಂಟಾಲ್ ಚಿಕನ್, ಮೊಟ್ಟೆ ಬಳಸಿ ಬಾಡೂಟ ತಯಾರಿಸಲಾಗಿತ್ತು. ವಿದ್ಯಾನಗರದ ಮನೆಗಳು, ಮುಖ್ಯ ರಸ್ತೆಯಲ್ಲಿ ಓಡಾಡುತ್ತಿದ್ದ ಸಾರ್ವಜನಿಕರಿಗೆ ಊಟ ಬಡಿಸಿದರು. ನಟ ಪುನೀತ್ ರಾಜಕುಮಾರ್ ಅವರನ್ನು ಪ್ರತಿ ವರ್ಷ ಇದೆ ರೀತಿ ಸ್ಮರಣೆ ಮಾಡಿಕೊಳ್ಳುತ್ತೇವೆ ಎಂದು ಶ್ರೀ ವೀರಕೇಸರಿ ಯುವಕರ ಸಂಘದ ಹರೀಶ್ ತಿಳಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

