ಹುಬ್ಬಳ್ಳಿ : ದೇವರ ಮತ್ತೊಂದು ರೂಪವೇ ಜನ್ಮ ಕೊಡುವ ತಾಯಿ ನಮ್ಮನ್ನು ಪ್ರೀತಿಸಿ ಸರಿದಾರಿಯಲ್ಲಿ ನಡೆಸುವಂತಹ ನಮ್ಮ ಜೀವನದ ಮೊದಲ ಗುರುವೇ ತಾಯಿ ದೇವರು ಎಲ್ಲೆಡೆ ವಾಸಿಸಲು ಸಾಧ್ಯವಿಲ್ಲ ಎಂದು ದೇವರೇ ತಾಯಿಯನ್ನು ಸೃಷ್ಟಿಸಿದ ಎಂಬ ಮಾತುಗಳಿವೆ ಅದರಲ್ಲಿ ಕೆಲವು ಪ್ರಮುಖ ಕ್ಷಣಗಳನ್ನು ನಾವು ವಿವರಿಸಬಹುದು ತನ್ನ ಮಕ್ಕಳ ಹಸಿವನ್ನ ನೀಗಿ ಕಷ್ಟಗಳನ್ನ ದೂರ ಮಾಡಿ ಪ್ರೀತಿ ಮತ್ತು ರಕ್ಷಣೆಯನ್ನ ನೀಡುವ ತಾಯಿ ಈ ಪ್ರಪಂಚದಲ್ಲಿ ವಿಭಿನ್ನ ಸ್ಥಾನವನ್ನ ಪಡೆದು ದೇವರ ರೂಪದಲ್ಲಿ ಯಾವಾಗಲೂ ತನ್ನ ಮಕ್ಕಳ ಏಳಿಗೆಗಾಗಿ ಶ್ರಮಿಸುತ್ತಾಳೆ.

ಹೌದು ಹುಬ್ಬಳ್ಳಿಯ ಬೆಂಗಿರಿಯಲ್ಲಿ ದುರ್ಗಾದೇವಿಯ ಆರಾಧತಿಯಾಗಿದ್ದ ಚೌಡಮ್ಮ ದುರ್ಗಪ್ಪ ಪೂಜಾರ್ ರವರು ಕೂಡ ತಾಯಿಯೇ ದೇವರು ಅನ್ನೋ ಮಾತಿಗೆ ತಕ್ಕಂತೆ ಜೀವನ ಮಾಡಿದ್ದಾರೆ ಇವರು 40 ವರ್ಷಗಳಿಂದ ದುರ್ಗಾದೇವಿಯ ಸೇವೆ ಮಾಡಿಕೊಂಡು ಬಂದಿದ್ದರು ಚೌಡಮ್ಮ ಅವರಿಗೆ ನಾಲ್ಕು ಜನ ಗಂಡು ಮಕ್ಕಳು ಮೂರು ಜನ ಹೆಣ್ಣು ಮಕ್ಕಳು 28 ಜನ ಮಕ್ಕಳು ಹಾಗೂ 24 ಜನ ಮರಿ ಮೊಮ್ಮಕ್ಕಳನ್ನು ಹೊಂದಿದ್ದರು ದಿನಾಂಕ 26.10.2019ರಂದು ತಮ್ಮ ಕೊನೆಯ ಪ್ರಯಾಣದ ಮುಗಿಸಿದ್ದರು.

6.ಆದ್ದರಿಂದ ಅವರ ಮಗ ದೇವೇಂದ್ರಪ್ಪ ದುರ್ಗಪ್ಪ ಪೂಜಾರ್ ರವರು ತಮ್ಮ ತಾಯಿಯಾದ ದಿವಂಗತ ಮಾತು ಶ್ರೀ ಚೌಡಮ್ಮ ದುರ್ಗಪ್ಪ ಪೂಜಾರ್ ಅವರ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಹಮ್ಮಿಕೊಂಡಿದ್ದು ಶ್ರೀ ಶೆಟ್ಟಿಗಮ್ಮ ದೇವಸ್ಥಾನದಿಂದ ದುರ್ಗಾದೇವಿ ದೇವಸ್ಥಾನದವರೆಗೂ ಮೂರ್ತಿಯ ಭವ್ಯ ಮೆರವಣಿಗೆಯನ್ನ ಕುಂಭಮೇಳದ ಜೊತೆ ಅದ್ದೂರಿಯಾಗಿ ಮಾಡಿದ್ದಾರೆ ಕಾರ್ಯಕ್ರಮದ ನಂತರ ಅನ್ನ ಸಂಧರ್ಪಣೆ ಯನ್ನು ಕೂಡ ಏರ್ಪಡಿಸಿದ್ದರು ಈ ಸಂದರ್ಭದಲ್ಲಿ ಮಂಗಳ ಮುಖಿಯರಿಗೆ ಉಳಿತುಂಬಿದ್ದು ಚೌಡಮ್ಮ ದುರ್ಗಪ್ಪ ಪೂಜಾರ್ ರವರ ತವರು ಮನೆಯವರು ಹಾಗೂ ಗುಂಬಗೊಳ್ ಊರಿನ ಜನರು ಕೂಡ ಭಾಗಿಯಾಗಿ ಈ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಿದರು ಈ ಮೂಲಕ ದೇವೇಂದ್ರಪ್ಪ ದುರ್ಗಪ್ಪ ಪೂಜಾರ್ ಎಲ್ಲಾ ಮಕ್ಕಳಿಗೂ ಪ್ರೇರಣೆಯಾಗಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

