ಹುಬ್ಬಳ್ಳಿಯ ಕುಸುಗಲ್ ರೋಡ್ ಹತ್ತಿರದ ಆದರ್ಶ ನಗರದಲ್ಲಿ ಶಬರಿಮಲೈ ಅಯ್ಯಪ್ಪ ಸ್ವಾಮಿ ಭಜನ ಮಂಡಳಿ ವತಯಿಂದ ಶ್ರೀ ಅಯ್ಯಪ್ಪ ಸ್ವಾಮಿ, ಶ್ರೀ ಮಹಾಗಣಪತಿ ಮತ್ತು ಶ್ರೀ ಸುಬ್ರಹ್ಮಣ್ಯ ಸ್ವಾಮಿ ಮೂರ್ತಿಗಳನ್ನು ಪ್ರತಿಷ್ಟಾಪನೆ ಮಾಡಲಾಯಿತು. ದೇವರ ಮೂರ್ತಿಗಳನ್ನು ಆದರ್ಶ ಬಡಾವಣೆಯ ಎಲ್ಲಾ ನಾಗರಿಕರು ಸೇರಿ ವಿಜೃಂಭಣೆಯಿಂದ ಸ್ವಾಗತಿಸಿದರು.

ದೇವರ ಗುಡಿಯ ಕಟ್ಟಡವನ್ನು ಎಂ ಜೆ ಕನ್ಸ್ಟ್ರಕ್ಷನ್ ಅವರ ನಿರ್ಮಾಣ ಮಾಡಿದ್ದಾರೆ ಹಾಗೂ ಎಲ್ಲಾ ದೇವರ ಮೂರ್ತಿಗಳನ್ನು ಕೇರಳದ ರತಿಷ್ ಕುಮಾರ್ ಹಾಗೂ ಅವರ ತಂಡದವರಿಂದ ನಿರ್ಮಿಸಲಾಗಿದೆ, ಪಂಚವಾದ್ಯಂ ಮೇಳವನ್ನು ಶ್ರೀ ರಾಜಾ ಪದ್ಮನಾಭ ಮಾರರ್ ಹಾಗೂ ಅವರ ತಂಡದಿಂದ ನುಡಿಸಲಾಯಿತು, ಎಲ್ಲಾ ದೇವರುಗಳ ಪೂಜಾ ಪುನಸ್ಕಾರಗಳನ್ನು ಕೇರಳದ ಪುಜ್ಯರಾದ ಬ್ರಹ್ಮಶ್ರೀ ನಾರಾಯಣ ಪಂಡರಾತಿಲ್ ಅವರ ನೆರವೇರಿಸಿದರು, ಈ ದೇವರ ಗುಡಿಯ ಪುಜಾರಿಗಳಾದ ಶ್ರೀ ರಮಕಾಂತ್ ಅವರ ಕೂಡ ಉಪಸ್ಥಿತರಿದ್ದರು.