Breaking News

ಕರ್ನಾಟಕದಲ್ಲಿ ನಾಳೆ ಕೊನೆಯಾಗಲಿದೆ ಭಾರತ ಐಕ್ಯತಾ ಯಾತ್ರೆ


ರಾಯಚೂರು- ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ ಐಕ್ಯತಾ ಯಾತ್ರೆ ಕರ್ನಾಟಕದ ವ್ಯಾಪ್ತಿಯಲ್ಲಿನ ಸಂಚಾರವನ್ನು ನಾಳೆಗೆ ಪೂರ್ಣಗೊಳಿಸಲಿದೆ.

ಇಂದು ಬೆಳಗ್ಗೆ ರಾಯಚೂರು ಜಿಲ್ಲೆಯ ಯರಗೇರಾ ಗ್ರಾಮದಿಂದ ಪಾದಯಾತ್ರೆ ಆರಂಭವಾಯಿತು. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ್ ಸೇರಿದಂತೆ ಸ್ಥಳೀಯ ನಾಯಕರು ಯಾತ್ರೆಯಲ್ಲಿ ಭಾಗವಹಿಸಿದ್ದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಡವಾಗಿ ಯಾತ್ರೆಗೆ ಜೊತೆಗೂಡಿದರು. ಸಂಜೆ ರಾಯಚೂರು ನಗರ ಭಾಗದಿಂದ ಯಾತ್ರೆ ಪುನರಾಂಭವಾಗಲಿದ್ದು, ಗುಂಜ್ ವೃತ್ತದಲ್ಲಿ ಅಂತ್ಯವಾಗಲಿದೆ. ರಾತ್ರಿ ರಾಯಚೂರಿನ ಯೆಗನೂರಿನಲ್ಲಿ ವಿಶ್ರಾಂತಿ ಪಡೆಯಲಿದೆ.

Share News

About BigTv News

Check Also

ಸರಗಳ್ಳತನ ಮಾಡುತ್ತಿದ್ದ ಅಪ್ರಾಪ್ತ ಸೇರಿ ಇಬ್ಬರು ಆರೋಪಿಗಳ ಬಂಧನ

ಬೆಂಗಳೂರು: ಅಪ್ರಾಪ್ತ ಬಾಲಕನೊಂದಿಗೆ ಸೇರಿ ಮಹಿಳೆಯರ ಚಿನ್ನದ ಮಾಂಗಲ್ಯ ಸರ ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಡೇಪಾಳ್ಯ ಪೊಲೀಸರು ವಶಕ್ಕೆ …

Leave a Reply

Your email address will not be published. Required fields are marked *