Breaking News

60 ವರ್ಷದಿಂದ ಸ್ನಾನವೇ ಮಾಡದೇವಿರುವ ವ್ಯಕ್ತಿ ನಿಧನ


ಇರಾನ್‌ :  ಪ್ರಜೆಯಾಗಿರುವ ಅಮೌ ಹಾಜಿ 60 ವರ್ಷದಿಂದ ಸ್ನಾನವೇ ಮಾಡಿರಲಿಲ್ಲ. ಸ್ನಾನ ಮಾಡದೇ ಇರುವುದರಿಂದಲೇ ನಾನು ಇಷ್ಟು ವರ್ಷ ಜೀವಿಸಿದ್ದೇನೆ ಎಂದು ನಂಬಿದ್ದರು.

ಇರಾನ್‌ ನ ಬರಪೀಡಿತ ಪ್ರದೇಶದ ಸಮೀಪವಿರುವ ಡೆಜಾಘ್‌ ಗ್ರಾಮದ ಸಣ್ಣ ಕೋಣೆಯಲ್ಲಿ ವಾಸವಾಗಿದ್ದ ಅಮೌ ಹಾಜಿ, ಹೊದ್ದುಕೊಳ್ಳಲು ಒಂದು ಬೆಡ್‌ ಶೀಟ್‌ ಮಾತ್ರ ಹೊಂದಿದ್ದರು. 60 ವರ್ಷದಿಂದ ಸ್ನಾನ ಮಾಡದೇ ಸೋಪು ಕೂಡ ಬಳಸದೇ ಜೀವಿಸಿದ್ದ ಅವರು, ಇತ್ತೀಚೆಗಷ್ಟೇ ಮೊದಲ ಬಾರಿ ಸ್ನಾನ ಮಾಡಿದ್ದರು. ಮುಳ್ಳಂದಿ ಮಾಂಸ ಪ್ರಿಯರಾಗಿದ್ದ ಅಮೌ ಹಾಜಿ ಸಿಗರೇಟ್‌ ಅಥವಾ ಪೈಪ್‌ ಸಿಗರೇಟ್‌ ಸೇದುತ್ತಿದ್ದರು. ಬಹುತೇಕ ಬಾರಿ ಸತ್ತ ಪ್ರಾಣಿಯ ಮಾಂಸದ ತುಂಡು ಪೈಪ್‌ ನಲ್ಲಿ ಇರಿಸಿ ಅದಕ್ಕೆ ಸಿಗರೇಟು ಸೇದುವ ಅಭ್ಯಾಸ ಹೊಂದಿದ್ದರು.

ಹಳೆಯ ಎಣ್ಣೆಯ ಬಾಟಲಿಯಲ್ಲಿ ತುಂಬಿದ ಕೊಳಕು ನೀರು ಹಾಗೂ ಕೊಳೆತ ಮಾಂಸವನ್ನು ಸೇವಿಸುತ್ತಿದ್ದರು. ಸ್ವಚ್ಛ ನೀರು ಹಾಗೂ ಶುದ್ಧ ಆಹಾರ ನೀಡಿದರೆ ಹಾಜಿ ಬೇಸರಿಸಿಕೊಳ್ಳುತ್ತಿದ್ದರು. ಇತ್ತೀಚೆಗಷ್ಟೇ ಗ್ರಾಮಸ್ಥರು ಬಲವಂತದಿಂದ ಸ್ನಾನ ಮಾಡಿಸಿದ್ದರು ಎಂದು ಸ್ಥಳೀಯ ಪತ್ರಿಕೆ ವರದಿ ಮಾಡಿದೆ.

Share News

About BigTv News

Check Also

ಕೋಲಾರದಲ್ಲಿ ರೈತರು-ಅರಣ್ಯ ಇಲಾಖೆ ಮಧ್ಯೆ ಸಂಘರ್ಷ: ಸಿಬ್ಬಂದಿ ಮೇಲೆ ಮಚ್ಚಿನಿಂದ ಅಟ್ಯಾಕ್‌

ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮಲ್ಲಂಪಲ್ಲಿ ಗ್ರಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಮಚ್ಚಿನಿಂದ ಹಲ್ಲೆ ನಡೆದಿದ್ದು, ಮೂವರು ಗಂಭೀರವಾಗಿ …

Leave a Reply

Your email address will not be published. Required fields are marked *