Breaking News

ನಾನಾಗಿಯೇ ಹು-ಧಾ ಕೇಂದ್ರ ಕ್ಷೇತ್ರದಿಂದ ಸ್ಪರ್ಧೆ ಮಾಡ್ತೀನಿ ಅಂತ ಹೇಳಿರಲಿಲ್ಲ : ಉಲ್ಟಾ ಹೊಡೆದ ಶೆಟ್ಟರ್

ಹುಬ್ಬಳ್ಳಿ: ನೀವು ಕೇಳಿದ ಪ್ರಶ್ನೆಗೆ ಮಾತ್ರ ನಾನು ಉತ್ತರಿಸಿದ್ದೇನೆ. ನೀವೇ ಎಬ್ಬಿಸಿ ಕೊಡ್ತೀರಿ ನಂತರ ಹಂಗೇಕೆ ಹೇಳ್ತೀರಿ ಅಂತ ಪ್ರಶ್ನಿಸ್ತೀರಿ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಉಲ್ಟಾ ಹೊಡೆದಿದ್ದಾರೆ.

ನಗರದಲ್ಲಿಂದು ಮಾತನಾಡಿದ ಅವರು, ಯಾವ ಕ್ಷೇತ್ರದಲ್ಲಿ ಸ್ಪರ್ಧೆ ಮಾಡ್ತೇನೆ ಅಂತ ಯಾರೂ ಹೇಳಂಗಿಲ್ಲ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕಟೀಲ್ ಹೇಳಿಕೆಗೆ ಶೆಟ್ಟರ್ ಪ್ರತಿಕ್ರಿಯಿಸಿದ ಅವರು ಪತ್ರಕರ್ತರ ಪ್ರಶ್ನೆಗೆ ಸಿಡಿಮಿಡಿಗೊಂಡರು.ಕೇಂದ್ರದ ಎಸ್ ಎಸ್ ಸಿ ಪರೀಕ್ಷೆ ಯಲ್ಲಿ ಕನ್ನಡದ ಕಡೆಗಣನೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಪ್ರಾದೇಶಿಕ ಭಾಷೆಗಳನ್ನು ಕೇಂದ್ರ ಸರ್ಕಾರ ಕಡೆಗಣಿಸ್ತಿಲ್ಲ. ಐಎಎಸ್ ಪರೀಕ್ಷೆಯಲ್ಲಿಯೂ ಕನ್ನಡಕ್ಕೆ ಆದ್ಯತೆ ನೀಡಿದೆ ‌. ಕನ್ನಡ ಭಾಷೆಯಲ್ಲಿಯೇ ಪರೀಕ್ಷೆ ಬರೆದು ಐಎಎಸ್ ಅಧಿಕಾರಿಗಳಾಗಿದ್ದಾರೆ . ಹಾಗೇನಾದ್ರೂ ಕನ್ನಡಕ್ಕೆ ಅನ್ಯಾಯವಾಗಿದೆ ಕೇಂದ್ರ ಜೊತೆ ಮಾತಾಡ್ತೀನಿ. ಕೇಂದ್ರದ ಪರೀಕ್ಷೆಗಳಲ್ಲಿ ಕನ್ನಡಕ್ಕೆ ಆದ್ಯತೆ ಸಿಗುವಂತಹ ಕೆಲಸ ಮಾಡ್ತೇವೆ.ಸ್ಪರ್ಧಾತ್ಮಕ ಪರೀಕ್ಷೆ ಕನ್ನಡ ಭಾಷೆಯಲ್ಲಿಯೇ ಬರೆಯುವಂತೆ ಒತ್ತು ಕೊಡ್ತೇವೆ .

ಕನ್ನಡಕ್ಕೆ ಆದ್ಯತೆ ನೀಡುವಂತೆ ಮನವಿ ಮಾಡುತ್ತೇವೆ .
ಕನ್ನಡಕ್ಕೆ ಆದ್ಯತೆ ಸಿಗದೇ ಇರುವ ಪರೀಕ್ಷೆಗಳ ಬಗ್ಗೆಯೂ ಗಮನ ಸೆಳೀತೇವೆ. ಹಿಂದೆ ಈ ರೀತಿ ಆದಾಗಲೂ ಕೇಂದ್ರದ ಮೇಲೆ ಒತ್ತಡ ತಂದು ಸರಿ ಮಾಡಿದ್ದೇವೆ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡುತ್ತೇವೆ ಎಂದರು.

Share News

About BigTv News

Check Also

ಕೋಲಾರದಲ್ಲಿ ರೈತರು-ಅರಣ್ಯ ಇಲಾಖೆ ಮಧ್ಯೆ ಸಂಘರ್ಷ: ಸಿಬ್ಬಂದಿ ಮೇಲೆ ಮಚ್ಚಿನಿಂದ ಅಟ್ಯಾಕ್‌

ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮಲ್ಲಂಪಲ್ಲಿ ಗ್ರಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಮಚ್ಚಿನಿಂದ ಹಲ್ಲೆ ನಡೆದಿದ್ದು, ಮೂವರು ಗಂಭೀರವಾಗಿ …

Leave a Reply

Your email address will not be published. Required fields are marked *