ಬೆಂಗಳೂರು : ಹೊನ್ನಾಳಿ ಕ್ಷೇತ್ರದ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರ ಸಹೋದರನ ಪುತ್ರ ಚಂದ್ರಶೇಖರ್ ಅನುಮಾನಾಸ್ಪದ ಸಾವು ಪ್ರಕರಣದಲ್ಲಿ ಸಂಘಟನೆಯೊಂದು ವ್ಯವಸ್ಥಿತ ಸಂಚು ರೂಪಿಸಿ ಕೊಲೆ ಮಾಡಿರುವ ಅನುಮಾನಗಳು ದಟ್ಟವಾಗಿವೆ.
ಅಕ್ಟೋಬರ್ 30ರಿಂದ ನಾಪತ್ತೆಯಾಗಿದ್ದ ಚಂದ್ರಶೇಖರ್ ಅವರ ಕಾರು ನಿನ್ನೆ ಹೊನ್ನಾಳ್ಳಿಯ ನ್ಯಾಮತಿ ಮಧ್ಯೆ ಸೊರಟುರು ಬಳಿ ತುಂಗಾ ಮೇಲ್ದಂಡೆಯ ಕಾಲುವೆಯಲ್ಲಿ ಪತ್ತೆಯಾಗಿದೆ.ಕ್ರೈನ್ ಬಳಸಿ ಕಾರನ್ನು ಮೇಲೆತ್ತಿದ್ದಾಗ ಹಿಂಬದಿ ಸೀಟಿನಲ್ಲಿ ಚಂದ್ರಶೇಖರ್ ಅವರ ಶವ ಪತ್ತೆಯಾಗಿದೆ.
ಸುಮಾರು 20 ಅಡಿ ನಾಲೆಯಲ್ಲಿ ಕಾರು ಮುಳುಗಿ ಸುಮಾರು ಐದು ದಿನಗಳಾಗಿರುವ ಸಾಧ್ಯತೆಗಳಿದ್ದರಿಂದ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಶಾಸಕ ರೇಣುಕಾಚಾರ್ಯ ಅವರ ಹೇಳಿಕೆಯ ಪ್ರಕಾರ ಚಂದ್ರ ಶೇಖರ್ ಅವರ ಕತ್ತು ಮತ್ತು ಬೆನ್ನಿಗೆ ಮಚ್ಚಿನಿಂದ ಹಲ್ಲೆ ಮಾಡಿ, ಬಿಳಿ ಬಟ್ಟೆಯಲ್ಲಿ ಕೈ ಕಾಲು ಕಟ್ಟಿ ಹಾಕಿ ಹತ್ಯೆ ಮಾಡಿ ಕಾರಿನಲ್ಲಿ ಹಾಕಲಾಗಿದೆ.
ಕಾರನ್ನು ಮೇಲೆತ್ತಿದಾಗ ಕಂಡು ಬಂದ ದೃಶ್ಯಗಳು ಹಲವು ಅನುಮಾನಗಳನ್ನು ಮೂಡಿಸಿವೆ. ಕಾರಿನ ಮುಂಬಾಗ ಜಕ್ಕಂ ಆಗಿತ್ತು. ಮೇಲ್ನೋಟಕ್ಕೆ ಇದು ಅಪಘಾತ ಎಂಬಂತೆ ಬಿಂಬಿತವಾಗಿತ್ತು. ಡೈವರ್ ಬದಿಯ ಸೀಟಿನ ಏರ್ ಬ್ಯಾಗ್ ಒಪನ್ ಆಗಿರಲಿಲ್ಲ.
ಬದಲಾಗಿ ಎಡಬದಿಯ ಸೀಟಿನ ಏರ್‍ಬ್ಯಾಗ್ ತೆಗೆದುಕೊಂಡಿದೆ. ಡ್ರೈವರ್ ಸೀಟಿನ ಬೆಲ್ಟ್ ಲಾಕ್ ಆಗಿದೆ, ಆದರೂ ಚಂದ್ರ ಶೇಖರ್ ಅವರ ಶವ ಹಿಂಬದಿಯ ಸೀಟಿನಲ್ಲಿ ಪತ್ತೆಯಾಗಿದೆ. ಚಂದ್ರ ಶೇಖರ್ ಅವರ ಮೊಬೈಲ್ ಪತ್ತೆಯಾಗಿದ್ದು, ಅದನ್ನು ಪರಿಶೀಲನೆಗೆ ಒಳಪಡಿಸಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

