Breaking News

ಬಿಜೆಪಿಯದ್ದು ಡಬಲ್ ಇಂಜಿನ್ ಸರ್ಕಾರವಲ್ಲ, ಅದು ಟ್ರಬಲ್ ಇಂಜಿನ್ ಸರ್ಕಾರ : ಪ್ರಿಯಾಂಕ್ ಖರ್ಗೆ ವ್ಯಂಗ್ಯ

ಕಲಬುರಗಿ: ‘ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮ, ಗಂಗಾ ಕಲ್ಯಾಣ ಹಗರಣದಲ್ಲಿ ಸಿಲುಕಿ ಚರ್ಚಗೆ ಬಾರದ ಬಿಜೆಪಿಯದ್ದು ಡಬಲ್ ಇಂಜಿನ್ ಸರ್ಕಾರವಲ್ಲ, ಅದು ಟ್ರಬಲ್ ಇಂಜಿನ್ ಸರ್ಕಾರ’ ಎಂದು ಕೆಪಿಸಿಸಿ ವಕ್ತಾರ ಹಾಗೂ ಶಾಸಕ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದರು.

ನಗದರಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರಧಾನಿ ಮೋದಿ ಆಗಮನಕ್ಕಾಗಿ ಬೆಂಗಳೂರಿನ ರಸ್ತೆಗಳಿಗೆ ತೇಪೆ ಹಚ್ಚಲಾಗುತ್ತಿದೆ. ಪ್ರಧಾನಿ ಬಂದು ಹೋದ ಮೇಲೆ ತೇಪೆ ಹಚ್ಚಿದ ರಸ್ತೆಗಳು ಕಿತ್ತು ಹೋಗುತ್ತವೆ. ಪ್ರಧಾನಿ ಕಚೇರಿಯಿಂದ ಬಂದ ಆದೇಶಕ್ಕೆ ರಾಜ್ಯ ಸರ್ಕಾರದಲ್ಲಿ ಕಿಮ್ಮತ್ತಿಲ್ಲ’ ಎಂದು ಅವರು ಟೀಕಿಸಿದರು.

‘ಸರ್ಕಾರದ ಶೇ 40ರಷ್ಟು ಕಮಿಷನ್ ಹೊಡೆದ ಬಗ್ಗೆ ಹೋರಾಡಿ, ಪೇ ಸಿಎಂ ಅಭಿಯಾನ ನಡೆಸಿದ್ದೆ. ಇದಕ್ಕೆ ಪ್ರತಿಕಾರವಾಗಿ ಬಿಜೆಪಿಗರು ನನ್ನ ವಿರುದ್ಧ ಪೋಸ್ಟರ್ ಅಭಿಯಾನ ನಡೆಸಿದ್ದಾರೆ. ಇದಕ್ಕೂ ಮೊದಲು ಅಕ್ರಮ ಮರಳು, ಅಕ್ಕಿ ದಂಧೆ ಯಾರು ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಚರ್ಚೆಗೆ ಬಂದ ಬಳಿಕ ಪೋಸ್ಟರ್ ಅಭಿಯಾನಕ್ಕೆ ನಾನೇ ಕಲರ್ ಪ್ರಿಂಟ್ ಮಾಡಿಸಿ ಕೊಡುತ್ತೇನೆ’ ಎಂದರು.

‘ನಾನು ಎಲ್ಲಿಯೇ ಇದ್ದರೂ ಚಿತ್ತಾಪುರ ಕ್ಷೇತ್ರದ ಜನರಿಗೆ ತಿಳಿಯುತ್ತದೆ. ಆದರೆ, ನನ್ನ ಇರುವಿಕೆಯ ಬಗ್ಗೆ ಬಿಜೆಪಿ ನಾಯಕರಿಗೆ ಉತ್ತರಿಸುವ ಅಗತ್ಯವಿಲ್ಲ. ರಾಹುಲ್ ಗಾಂಧಿ ಅವರ ಭಾರತ ಜೋಡೊ ಯಾತ್ರೆಯಲ್ಲಿ 511 ಕಿ.ಮೀ ನಡೆದಿದ್ದೇನೆ. ಮಲ್ಲಿಕಾರ್ಜುನ ಖರ್ಗೆ ಅವರ ಎಐಸಿಸಿ ಅಧ್ಯಕ್ಷ ಚುನಾವಣೆಯ ಬಳಿಕ ಕೋಲಿ, ಕಬ್ಬಲಿಗ ಹಾಗೂ ಕುರುಬ ಸಮುದಾಯವನ್ನು ಎಸ್‌ಟಿಗೆ ಸೇರಿಸುವಂತೆ ಒತ್ತಾಯಿಸಲು ಕೇಂದ್ರ ಸಚಿವರನ್ನು ಭೇಟಿ ಮಾಡಲು ಮೂರು ದಿನ ದೆಹಲಿಯಲ್ಲಿ ಇದ್ದೆ. ಇದೆಲ್ಲವೂ ಕ್ಷೇತ್ರದ ಜನರಿಗೆ ಗೊತ್ತಿದೆ’ ಎಂದರು.

Share News

About BigTv News

Check Also

68 ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿದ ಆರೋಪ, ಕೆಎಎಸ್ ಅಧಿಕಾರಿ ವಿರುದ್ಧ ಎಫ್‌ಐಆರ್!

ಬೆಂಗಳೂರು ಗ್ರಾಮಾಂತರ: ದೇವನಹಳ್ಳಿ ತಾಲೂಕಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ, ಅಕ್ರಮವಾಗಿ ಆರ್‌ಟಿಸಿ ಖಾತೆ ಬದಲಾವಣೆ …

Leave a Reply

Your email address will not be published. Required fields are marked *