Breaking News

ಸಿನಿಮಾದಲ್ಲಿ ಅವಕಾಶ ನೀಡಲು ಬಾಲಕಿಯ ನಗ್ನ ಭಾವಚಿತ್ರ ಕೇಳಿದ ಯುವಕನ ಬಂಧನ

ಸಿನಿಮಾದಲ್ಲಿ ಅವಕಾಶ ಕಲ್ಪಿಸುವುದಾಗಿ ತಿಳಿಸಿ ಬಾಲಕಿಯ ನಗ್ನ ಭಾವಚಿತ್ರಗಳನ್ನು ಕೇಳಿದ ಕಾಸರಗೋಡು ಕಾಟಿಪಳ್ಳದ ಶಿಬಿನ್‌ (29) ಎಂಬಾತನನ್ನು ಕಲ್ಲಿಕೋಟೆ ಬೇಪೂರು ಪೊಲೀಸರು ಬಂಧಿಸಿದ್ದಾರೆ. ಬೇಪೂರು ನಿವಾಸಿಯಾದ 10ನೇ ತರಗತಿ ವಿದ್ಯಾರ್ಥಿನಿಗೆ ತಾನು ಸಿನಿಮಾ ನಿರ್ದೇಶಕನೆಂದೂ, ಸಿನಿಮಾದಲ್ಲಿ ಅಭಿನಯಿಸಲು ಅವಕಾಶವೊದಗಿಸುವುದಾಗಿಯೂ ಅದಕ್ಕಾಗಿ ಆಕೆಯ ನಗ್ನ ಚಿತ್ರಗಳನ್ನು ನೀಡುವಂತೆ ತಿಳಿಸಿ ಬಾಲಕಿಗೆ ಫೋನ್‌ ಕರೆ ಮಾಡಿದ್ದಲ್ಲದೆ ವಾಟ್ಸ್‌ಆಯಪ್‌ ಮೂಲಕ ಸಂದೇಶ ಕಳುಹಿಸಿದ್ದನೆಂದು ಪೊಲೀಸರಿಗೆ ದೂರು ನೀಡಲಾಗಿತ್ತು.ಪೊಲೀಸರು ಸೈಬರ್‌ ವಿಭಾಗದ ನೆರವಿನೊಂದಿಗೆ ಶಿಬಿನ್‌ನನ್ನು ಬಂಧಿಸಿದ್ದಾರೆ.

Share News

About BigTv News

Check Also

ವಿಟ್ಲ: 35 ಬಾರಿ ವಾರಂಟ್ ಜಾರಿಯಾಗಿದ್ದ ಆರೋಪಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ

ಕಳೆದ ಒಂಬತ್ತು ವರ್ಷಗಳಿಂದ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ವಿಟ್ಲ …

Leave a Reply

Your email address will not be published. Required fields are marked *