ಧಾರವಾಡ : ನವಲೂರು ಬಡಾವಣೆಯಲ್ಲಿ ಕುರಿ ಕಾಯುತ್ತಿದ್ದವನ ಮೇಲೆ ಕೊಡಲಿಯಿಂದ ಹಲ್ಲೆ ಖಂಡಿಸಿ ಹಾಗೂ ಕುರುಬರಿಗೆ ಎಸ್ಸಿ ಎಸ್ಟಿ ಮೀಸಲಾತಿ ಒದಗಿಸಬೇಕು ಆಗ್ರಹಿಸಿ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಕುರಿಗಾರರು ಕುರಿಗಳ ಜೋತೆಗೆ ಬಂದು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿದ್ದು ಈ ಸಂದರ್ಭದಲ್ಲಿ ಕುರುಬ ಸಮಾಜಕ್ಕೆ ಎಸ್ಟಿ ಮೀಸಲಾತಿ ಒದಗಿಸಬೇಕು ಕುರುಬರಿಗೆ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದ್ದರು.
ಪ್ರತಿಭಟನೆಯಲ್ಲಿ ಬಸವರಾಜ ದೇವರು ಸ್ವಾಮೀಜಿ, ಬಸವರಾಜ ಮಲಕಾರಿ, ಬಸವರಾಜ ಕಟಗಿ, ರಮೇಶ ನಲವಡಿ, ನಿಂಗಪ್ಪ ಬಡಕುರಿ, ಬಸವರಾಜ ನಾಯ್ಕರ ಸೇರಿದಂತೆ ಹಲವರು ಇದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

