Breaking News

ಕಲ್ಲು ಕ್ವಾರಿ ಕುಸಿದ ಪರಿಣಾಮ 8 ಮಂದಿ ಕಾರ್ಮಿರು ಸಾವು



ದಕ್ಷಿಣ ಮಿಜೋರಾಂ : ಇಲ್ಲಿ ಕಲ್ಲು ಕ್ವಾರಿ ಕುಸಿದ ಪರಿಣಾಮ 8 ಮಂದಿ ಕಾರ್ಮಿರು ಸಾವನ್ನಪ್ಪಿದ್ದಾರೆ. ಕಲ್ಲುಕ್ವಾರಿಯೊಳಗೆ 12 ಜನರು ಸಿಲುಕಿದ್ದರು. ಇನ್ನೂ 4 ಮಂದಿ ನಾಪತ್ತೆಯಾಗಿದ್ದಾರೆ. ಕ್ವಾರಿ ಕುಸಿದಾಗ ಸುಮಾರು 13 ಜನರು ಕೆಲಸ ಮಾಡುತ್ತಿದ್ದರು.

ಆದರೆ, ಒಬ್ಬಾತ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಮತ್ತು ಉಳಿದ 12 ಮಂದಿ ಸಿಕ್ಕಿಬಿದ್ದಿದ್ದಾರೆ. ಶೀಘ್ರದಲ್ಲೇ ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಲಾಗಿತ್ತು. ವರದಿಗಳ ಪ್ರಕಾರ ಎಲ್ಲಾ ಕಾರ್ಮಿಕರು ಬಿಹಾರದವರು. ಶೋಧ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ ಮತ್ತು ಕಾಣೆಯಾದವರೆಲ್ಲರೂ ಪತ್ತೆಯಾಗುವವರೆಗೂ ಮುಂದುವರೆಸಲಾಗುತ್ತದೆ” ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಹೇಳಿಕೆ ತಿಳಿಸಿದೆ.

ರಾಜ್ಯ ವಿಪತ್ತು ನಿರ್ವಹಣಾ ಪಡೆ, ಗಡಿ ಭದ್ರತಾ ಪಡೆ ಮತ್ತು ಅಸ್ಸಾಂ ರೈಫಲ್ಸ್ ಮತ್ತು ಯಂಗ್ ಮಿಜೋ ಅಸೋಸಿಯೇಷನ್ ​​(ವೈಎಂಎ) ಸ್ವಯಂಸೇವಕರು ಕುಸಿತದ ಸ್ಥಳದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಐಜ್ವಾಲ್‌ನಿಂದ ಸುಮಾರು 160 ಕಿಮೀ ದೂರದಲ್ಲಿರುವ ದಕ್ಷಿಣ ಮಿಜೋರಾಂನ ಹ್ನಾಥಿಯಾಲ್ ಜಿಲ್ಲೆಯಲ್ಲಿ ಈ ದುರದೃಷ್ಟಕರ ಘಟನೆ ನಡೆದಿದೆ.

Share News

About BigTv News

Check Also

ಅಡುಗೆ ಮಾಡುವುದನ್ನ ಕಲಿಬೇಕಮ್ಮ: ಅತ್ತೆ ಬುದ್ಧಿ ಹೇಳಿದ್ದಕ್ಕೆ 18 ವರ್ಷದ ಯುವತಿ ಆತ್ಮಹತ್ಯೆ!

ಚಿಕ್ಕಬಳ್ಳಾಪುರ: ಇತ್ತೀಚಿನ ದಿನಗಳಲ್ಲಿ ಯುವಕ- ಯುವತಿಯರಿಗೆ ಬುದ್ಧಿವಾದ ಹೇಳುವಂತಿಲ್ಲ. ವಾರದ ಹಿಂದೆಯಷ್ಟೇ ಮೊಬೈಲ್​ ನೋಡಬೇಡ ಎಂದು ಹೇಳಿದಕ್ಕೆ ಕೋಪಗೊಂಡು ಯುವತಿಯೊಬ್ಬಳು …

Leave a Reply

Your email address will not be published. Required fields are marked *