Breaking News

ಸಾರ್ವತ್ರಿಕ ಚುನಾವಣೆ : ನೇಪಾಳ ಅಂತಾರಾಷ್ಟ್ರೀಯ ಗಡಿ ಬಂದ್



ನೇಪಾಳ: ನವೆಂಬರ್​ 20 ರಂದು ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಭಾರತ ನೇಪಾಳ ಅಂತಾರಾಷ್ಟ್ರೀಯ ಗಡಿಯನ್ನು ನವೆಂಬರ್ 17 ರ ಮಧ್ಯರಾತ್ರಿಯಿಂದ​ 72 ಗಂಟೆಗಳ ಕಾಲ ಮುಚ್ಚಲು ನಿರ್ಧರಿಸಲಾಗಿದೆ.

ಈ ಬಗ್ಗೆ ಭಾರತದ ಗೃಹ ಇಲಾಖೆಗೆ ಪತ್ರ ಬರೆದಿರುವ ನೇಪಾಳ ಸರ್ಕಾರ ಮತದಾನದ ಬಳಿಕ ಅಂದರೆ, ನವೆಂಬರ್​ 20 ರಂದು ರಾತ್ರಿ 8 ಗಂಟೆಗೆ ಗಡಿ ತೆರೆಯಲಾಗುವುದು. ವಿಮಾನಗಳ ಮೂಲಕ ನೇಪಾಳಕ್ಕೆ ಬರುವ ಎಲ್ಲ ದೇಶಗಳ ಪ್ರಯಾಣಿಕರು ಪಾಸ್‌ಪೋರ್ಟ್ ಮತ್ತು ಟಿಕೆಟ್ ಅನ್ನು ಕಡ್ಡಾಯವಾಗಿ ಒಪ್ಪಿಸಬೇಕು. ಆಂಬ್ಯುಲೆನ್ಸ್, ನೀರು, ಹಾಲಿನ ಟ್ಯಾಂಕರ್, ಅಗ್ನಿಶಾಮಕ ವಾಹನ ಸೇರಿದಂತೆ ತುರ್ತು ಸೇವೆಗಳಿಗೆ ವಿನಾಯಿತಿ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚುನಾವಣೆಯ ವೇಳೆ ಗಡಿ ಭಾಗದಿಂದ ಅಕ್ರಮ ಶಸ್ತ್ರಾಸ್ತ್ರಗಳು ಸರಬರಾಜಾಗುವ ಹಿನ್ನೆಲೆಯಲ್ಲಿ ಗಸ್ತು ಹೆಚ್ಚಿಸಲಾಗಿದೆ. ಶಾಂತಿಯುತವಾಗಿ ಚುನಾವಣೆ ನಡೆಸಲು ಎರಡೂ ದೇಶಗಳ ಭದ್ರತಾ ಪಡೆಗಳ ನಡುವೆ ಕಾರ್ಯತಂತ್ರ ರೂಪಿಸಲಾಗಿದೆ. ಇಂಡೋ-ನೇಪಾಳ ಗಡಿಯಿರುವ ವಾಲ್ಮೀಕಿನಗರದ ಗಂಡಕ್ ಬ್ಯಾರೇಜ್ ಬಳಿ ಭಾರತ ಮತ್ತು ನೇಪಾಳ ಜವಾನರು ಬಿಗಿ ಭದ್ರತೆ ಕೈಗೊಂಡಿದ್ದಾರೆ.

Share News

About BigTv News

Check Also

ನಕಲಿ ಔಷಧ ಜಾಲ ಪತ್ತೆ : ಬೆಂಗಳೂರಿನ 5 ಕಡೆ ‘ED’ ದಾಳಿ : ಆರೋಪಿ ವೀರೇಶ್ ಬ್ಯಾಂಕ್ ಖಾತೆ ಫ್ರೀಜ್!

ಬೆಂಗಳೂರು: ನಕಲಿ ಔಷಧಿ ತಯಾರಿಕೆ ಮತ್ತು ಮಾರಾಟ ಜಾಲದ ವಿರುದ್ಧ ಇಡಿ ಅಧಿಕಾರಿಗಳು ಬೆಂಗಳೂರು ಹಾಗೂ ಬೆಂಗಳೂರು ದಕ್ಷಿಣ ಜಿಲ್ಲೆಯ …

Leave a Reply

Your email address will not be published. Required fields are marked *