Breaking News

ರಾಜ್ಯದ ಮಹಿಳಾ ಸ್ವಸಹಾಯ ಸಂಘಗಳಿಗೆ 1.50 ಲಕ್ಷ ಸಬ್ಸಿಡಿಯೊಂದಿಗೆ ಸಹಾಯಧನಕ್ಕೆ ಅರ್ಜಿ ಆಹ್ವಾನ

ಬೆಂಗಳೂರು: ರಾಜ್ಯದ ಮಹಿಳಾ ಸ್ವಸಹಾಯ ಸಂಘಗಳಿಗೆ ಗುಡ್ ನ್ಯೂಸ್ ಎನ್ನುವಂತೆ 1.50 ಲಕ್ಷ ಸಬ್ಸಿಡಿಯೊಂದಿಗೆ ಸಹಾಯಧನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ರಾಜ್ಯ ಸರ್ಕಾರದಿಂದ ಪರಿಶಿಷ್ಟ ಪಂಗಡದವರು ಕನಿಷ್ಠ 10 ಸದಸ್ಯರು ಇರುವಂತ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರಿಗೆ 1.50 ಸಬ್ಸಿಡಿ ಸಹಾಯಧನದೊಂದಿಗೆ 2 ಲಕ್ಷದವರೆಗೆ ಸಾಲ ಮತ್ತು ಸಹಾಯಧನಕ್ಕೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಘಟಕ ವೆಚ್ಚವಾಗಿ 2.50 ಲಕ್ಷವನ್ನು ಸಾಲ ಮತ್ತು ಸಹಾಯಧನವಾಗಿ ನೀಡಲಾಗುತ್ತದೆ. ಇದರಲ್ಲಿ 1.50 ಲಕ್ಷ ಸಹಾಯಧನವಾಗಿದ್ದರೇ, ರೂ.1 ಲಕ್ಷ ಸಾಲವಾಗಿದೆ. ಇದಕ್ಕೆ ಶೇ.4ರಷ್ಟು ಬಡ್ಡಿಯನ್ನು ವಿಧಿಸಲಾಗುತ್ತದೆ.
ಅರ್ಜಿ ಸಲ್ಲಿಕೆ ಅಕ್ಟೋಬರ್ 23ರಿಂದ ಆರಂಭಗೊಳ್ಳಲಿದೆ ನವೆಂಬರ್ 23 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಕರ್ನಾಟಕ ಒನ್, ಗ್ರಾಮ ಒನ್ ಹಾಗೂ ಬೆಂಗಳೂರು ಒನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ 9482300400 ಸಂಪರ್ಕಿಸಲು ಕೋರಲಾಗಿದೆ.

Share News

About BigTv News

Check Also

ಅನ್ಯಕೋಮಿನ ಪಾಗಲ್ ಪ್ರೇಮಿಯಿಂದ ಟಾರ್ಚರ್ – ವಿದ್ಯಾರ್ಥಿನಿ ಸೂಸೈಡ್!

ಹಾಸನ: ಪ್ರೀತಿಸುವಂತೆ ಒತ್ತಾಯಿಸಿ ಕಿರುಕುಳ ನೀಡಿದ್ದಲ್ಲದೆ, ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಬೆದರಿಕೆ ಹಾಕಿದ ಆರೋಪದಿಂದ ಮನನೊಂದ 23 …

Leave a Reply

Your email address will not be published. Required fields are marked *