ಮಂಗಳೂರು: ಶಂಕಿತ ಉಗ್ರನ ಮನೆಯಲ್ಲಿ ಹಲವು ಸ್ಪೋಟಕ ಪತ್ತೆಯಾಗಿದೆ ಅಂಥ ಎಡಿಜಿಪಿ ಅಲೋಕ್ ಕುಮಾರ್ ಅವರು ಹೇಳಿದ್ದಾರೆ. ಈ ಬಗ್ಗೆ ಮಂಗಳೂರಿನಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ. ಅವರು ಇದೇ ವೇಳೇ ಘಟನೆಯಲ್ಲಿ ಚಾಲಕನಿಗೆ ಹಾಗೂ ಪ್ರಯಾಣಕನಿಗೆ ಗಾಯವಾಗಿದ್ದು, ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಘಟನೆ ಸಂಬಂಧ ಪೋಲಿಸರು ತನಿಖೆ ಮಾಡಿದ ವೇಳೆಯಲ್ಲಿ ಘಟನೆಯಲ್ಲಿ ಪ್ರಯಾಣಿಕರ ಮುಖ ಶೇ 40 ಸುಟ್ಟು ಹೋಗಿತ್ತು, ಈ ನಡುವೆ ಘಟನೆ ಸಂಬಂಧ ಗುರುತು ಪತ್ತೆ ಮಾಡುವ ಸಲುವಾಗಿ ಹಿರಿಯ ಅಧಿಕಾರಿಗಳು ಕೂಡಲೇ ತನಿಖೆ ನಡೆಸಿದ್ದಾರೆ. ಸ್ಥಳದಲ್ಲಿ ಪತ್ತೆಯಾದ ಆಧಾರ್ ಕಾರ್ಡ್ ವಿಳಾಸದ ಬಗ್ಗೆ ತನಿಖೆ ನಡೆಸಲಾಯಿತು. ಕೂಡಲೇ ತನಿಖೆ ಇಳಿದ ಕೂಡಲೇ ಅಂದು ರಾತ್ರಿ ಪ್ರೇಮ್ ರಾಜ್ ಜೊತೆಗೆ ಮಾತನಾಡಲಾಯಿತು, ಕೂಡಲೇ ನೀವು ಸ್ಥಳೀಯ ಪೋಲಿಸರಿಗೆ ನಾನು ಪ್ರೇಮ್ ರಾಜ್ ಆಗಿದ್ದು, ನಾನು ಮಂಗಳೂರಿನಲ್ಲಿ ಇರಲಿಲ್ಲ ಅಂತ ಮಾಹಿತಿ ನೀಡಬೇಕು ಅದರಂತೆ ಅವರು ತುಮಕೂರಿನ ಸ್ಥಳೀಯ ಪೋಲಿಸರಿಗೆ ತಿಳಿಸಿದ್ದಾರೆ.
ತನಿಖೆ ನಡೆಸುತ್ತಿದ್ ವೇಳೇಯಲ್ಲಿ ಕೇಂದ್ರ ತನಿಖಾ ತಂಡದಿಂದ ಸಹಾಯ ಪಡೆಯಲಾಯಿತು, ಗಾಯಾಳು ವ್ಯಕ್ತಿ ಮೈಸೂರಿನಲ್ಲಿ ಮೋಹನ್ ಕುಮಾರ್ ಎನ್ನುವವರ ಮನೆಯಲ್ಲಿ ಬಾಡಿಗೆ ಇದ್ದ ಬಗ್ಗೆ ಮಾಹಿತಿ ನೀಡಿದ್ದಾರೆ. ಇದೇ ವೇಳೆ ಶಿವಮೊಗ್ಗ ನಡೆದ ಗಲಾಟೆ ಬಳಿಕ ಪರಾರಿಯಾಗಿದ್ದ, ಇದೇ ವೇಳೆ ಆತ ನಾನಾ ಕಡೆಗಳಲ್ಲಿ ಸಂಚಾರ ಮಾಡುತ್ತಿದ್ದ, ಇದಲ್ಲದೇ ಶಂಕಿತ ಉಗ್ರ ವಾಸವಿದ್ದ ಮನೆಯಲ್ಲಿ ಸ್ಪೋಟಕ ವಸ್ತುಗಳು ಪತ್ತೆಯಾಗಿದ್ದ ಅಂಥ ತಿಳಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

